ಅಪ್ಪ ಕಡಿದ ಮರ ತಲೆ ಮೇಲೆ ಬಿದ್ದು ಮಗ ಸ್ಥಳದಲ್ಲೇ ಸಾವು

ಮಂಗಳೂರು/ಚಿಕ್ಕಮಗಳೂರು: ಮರ ಕಡಿಯುವಾಗ ಮರ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಎಸ್ಟೇಟಿನಲ್ಲಿ ನಡೆದಿದೆ.

ಅಬ್ದುಲ್ ಅಜೀಜ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಕೇರಳದಿಂದ ಟಿಂಬರ್ ಕಡಿಯಲು ಅಪ್ಪ-ಮಗ ಮೂಡಿಗೆರೆಗೆ  ಬಂದಿದ್ದರು ಎನ್ನಲಾಗಿದೆ. ಅಪ್ಪ ಮರ ಕತ್ತರಿಸುತ್ತಿದ್ದು, ಮಗ ಕೆಳಗೆ ನಿಂತಿದ್ದ. ಈ ವೇಳೆ ಕತ್ತರಿಸಿದ ಮರ ಆಕಸ್ಮಿಕವಾಗಿ ಅಬ್ದುಲ್ ಅಜೀಜ್ ಮೇಲೆ ಬಿದ್ದಿದೆ. ಪರಿಣಾಮ ಅಬ್ದುಲ್ ಅಜೀಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮೂಡಿಗೆರೆಯ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here