ಪಿಜ್ಜಾ ಸವಿಯುತ್ತಿದ್ದ ಮಹಿಳೆಯ ಸರ ಎಗರಿಸಿ ಪರಾರಿಯಾದ ಕಳ್ಳ – ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಮಂಗಳೂರು(ಹರಿಯಾಣ): ಮಹಿಳೆ ಪಿಜ್ಜಾ ತಿನ್ನುವುದನ್ನು ಗಮನಿಸಿದ ಕಳ್ಳನೊಬ್ಬ ಆಕೆಯ ಸರ ಕಸಿದು ಪರಾರಿಯಾದ ದೃಶ್ಯ ಸಮೇತದ ಘಟನೆಯೊಂದು ವೈರಲ್​ ಆಗಿದೆ.

ಮಹಿಳೆಯೊಬ್ಬಳು ತನ್ನ ಸ್ನೇಹಿತೆಯರೊಂದಿಗೆ ಮಳಿಗೆಯೊಂದರಲ್ಲಿ ಪಿಜ್ಜಾ ಸೇವಿಸುತ್ತಿದ್ದ ವೇಳೆ ಹೆಲ್ಮೆಟ್​ ಧರಿಸಿ ಅಂಗಡಿ ಒಳಗೆ ಬಂದ ಕಳ್ಳನೊಬ್ಬ ಮಹಿಳೆಯ ಕುತ್ತಿಗೆಯಲ್ಲಿದ್ದ ಚೈನ್​ ಕಸಿದು ಪರಾರಿಯಾದ ಘಟನೆ ಜೂ.8ರಂದು ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ.  ಕಳ್ಳನು ಪಿಜ್ಜಾ ಆರ್ಡರ್​ ಮಾಡಿದ ಬಳಿಕ ಆರ್ಡರ್​ಗಾಗಿ ಕಾದು ನಿಂತಂತೆ ನಟಿಸಿದ್ದಾನೆ. ಅತ್ತ ಮಹಿಳೆ ಪಿಜ್ಜಾ ತಿನ್ನುತ್ತಿದ್ದನ್ನು ಗಮನಿಸಿದ ಕಳ್ಳ ಆಕೆಯ ಕುತ್ತಿಗೆಯಲ್ಲಿದ್ದ ಚೈನ್​ ಕಸಿದು ಪರಾರಿಯಾಗಿದ್ದಾನೆ. ಈ ದೃಶ್ಯ ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು 20 ಗ್ರಾಂ ತೂಕದ ಸರವನ್ನು ಆತ ಕಸಿದುಕೊಂಡು ಹೋಗಿದ್ದಾನೆ. ಈ ಕುರಿತು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here