ಮಂಗಳೂರು(ಮುಂಬೈ): ಮುಂಬೈ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಏರ್ ಇಂಡಿಯಾ ಜೆಟ್ ಟೇಕ್ ಆಫ್ ಆಗುತ್ತಿದ್ದ ಅದೇ ವೇಳೆ ಇಂಡಿಗೋ ವಿಮಾನವು ಲ್ಯಾಂಡ್ ಆಗಿದೆ. ಕೆಲವೇ ಅಂತರದಲ್ಲಿ ನಡೆಯಬಹುದಾದಂತಹ ಭಾರೀ ಅನಾಹುತವೊಂದು ತಪ್ಪಿದೆ.
ಘಟನೆ ಬಗ್ಗೆ ವಾಯುಯಾನ ನಿಯಮಿತ ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದ್ದು, ಘಟನೆ ವೇಳೆ ಕರ್ತವ್ಯದಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಯನ್ನು ಪದಚ್ಯುತಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಎರಡೂ ವಿಮಾನಗಳು ಒಂದೇ ರನ್‌ವೇಯಲ್ಲಿ ಕಾಣಿಸಿಕೊಂಡಿವೆ. ಏರ್ ಇಂಡಿಯಾ ಜೆಟ್ ಟೇಕಾಫ್ ಆಗುತ್ತಿದ್ದಂತೆ ಇಂಡಿಗೋ ವಿಮಾನ ಲ್ಯಾಂಡಿಂಗ್ ಆಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://x.com/i/status/1799696057246560307