ಭೀಕರ ರಸ್ತೆ ಅಪಘಾತ – ನಾಲ್ವರು ಯೂಟ್ಯೂಬರ್ಸ್​​ ಸ್ಥಳದಲ್ಲೇ ದಾರುಣ ಸಾವು

ಮಂಗಳೂರು/ಉತ್ತರ ಪ್ರದೇಶ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಯೂಟ್ಯೂಬರ್ಸ್​ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಲಕ್ಕಿ, ಸಲ್ಮಾನ್, ಶಾರೂಖ್, ಶಹ್ನವಾಜ್ ಮೃತ ದುರ್ದೈವಿಗಳು.

ದುರ್ಘಟನೆಯಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ನಾಲ್ವರು ಯುವಕರು ಯೂಟ್ಯೂಬ್ ಚಾನಲ್ ನಡೆಸುತ್ತಿದ್ದರು. ಕಾಮಿಡಿ ಕಂಟೆಟ್​ ನೀಡುತ್ತಿದ್ದ ಇವರು, ಹುಟ್ಟುಹಬ್ಬ ಆಚರಣೆಗೆ ಹೋಗುತ್ತಿದ್ದರು. ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ದೌಡಾಯಿಸಿ ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಅವರನ್ನು ಸಿಎಚ್ ಸಿ ಗಜ್ರೌಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ನಾಲ್ವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ದುರ್ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here