ಡಿವೋರ್ಸ್​ ನೀಡಲು ಮುಂದಾದ ಪತಿ – ಫ್ಲೈಓವರ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಮಂಗಳೂರು/ಚೆನ್ನೈ: ಪತಿ ವಿಚ್ಛೇದನ ನೀಡಲು ಮುಂದಾಗಿರುವುದಕ್ಕೆ ಬೇಸರಗೊಂಡ ಹೆಂಡತಿ ಫ್ಲೈಓವರ್​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಚೆನ್ನೈನ ವೆಲಚೇರಿಯಲ್ಲಿ ದುರ್ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ವೃತ್ತಿಯಲ್ಲಿ ಟೆಕ್ಕಿಯಾಗಿರುವ ಶೋಭಾ (40) ಎಂದು ಗುರುತಿಸಲಾಗಿದೆ. ತಾಂಬರಂ ಸಮೀಪದ ಸೆಂಬಕ್ಕಂನಲ್ಲಿ ವಾಸವಿದ್ದ ಶೋಭಾಗೆ ನಾಲ್ಕು ವರ್ಷದ ಹಿಂದೆ ಕಾರ್ತಿಕ್​ (33) ಎಂಬವರ ಜೊತೆ ವಿವಾಹವಾಗಿತ್ತು. ದಂಪತಿಗೆ 3 ವರ್ಷದ ಮಗನಿದ್ದಾನೆ. ಪತಿ ಪತ್ನಿ ನಡುವೆ ಭಿನ್ನಾಭಿಪ್ರಾಯವಿದ್ದ ಕಾರಣ ಕಾರ್ತಿಕ್​ ಡಿವೋರ್ಸ್​ ನೀಡಲು ಮುಂದಾಗಿದ್ದನು. ಶೋಭಾ ಆತನ ಜೊತೆಗೆ ರಾಜಿ ಮಾಡಿಕೊಳ್ಳಲು ಯತ್ನಿಸಿದಾಗ ಆತ ನಿರಾಕರಿಸಿದ್ದಾನೆ. ಇದರಿಂದ ಬೇಸರಗೊಂಡಿದ್ದ ಶೋಭಾ ಸ್ಕೂಟರ್​ನಲ್ಲಿ ವೆಲಚೇರಿ ಫ್ಲೈಓವರ್ ಬಳಿ ಬಂದು ಫ್ಲೈಓವರ್​ನ ತಡೆಗೋಡೆ ಏರಿ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

LEAVE A REPLY

Please enter your comment!
Please enter your name here