ಸಾಮಾಜಿಕ ಮಾಧ್ಯಮ ಖಾತೆಗಳಿಂದ ‘ಮೋದಿ ಕಾ ಪರಿವಾರ್’ ತೆಗೆದು ಹಾಕಿ – ಪ್ರಧಾನಿ ಮೋದಿ ಮನವಿ

ಮಂಗಳೂರು/ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಮ್ಮ ಹಿಂಬಾಲಕರು ವ್ಯಾಪಕವಾಗಿ ಹಾಕಿಕೊಂಡಿದ್ದ ‘ಮೋದಿ ಕಾ ಪರಿವಾರ್’ ಅನ್ನು ತೆಗೆದುಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ, “ಚುನಾವಣಾ ಪ್ರಚಾರದ ವೇಳೆ ಭಾರತದಾದ್ಯಂತ ಜನರು ನನ್ನ ಮೇಲಿನ ಪ್ರೀತಿಯ ಸಂಕೇತವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ‘ಮೋದಿ ಕಾ ಪರಿವಾರ್’ ಅನ್ನು ಅಳವಡಿಸಿಕೊಂಡಿದ್ದಾರೆ. ನಾನು ಅದರಿಂದ ಸಾಕಷ್ಟು ಬಲ ಪಡೆದುಕೊಂಡಿದ್ದೇನೆ. ಭಾರತದ ಜನರು ಸತತ ಮೂರನೇ ಬಾರಿಗೆ ಎನ್ಡಿಎಗೆ ಬಹುಮತವನ್ನು ನೀಡಿದ್ದಾರೆ. ಇದು ಒಂದು ರೀತಿಯ ದಾಖಲೆಯಾಗಿದ್ದು ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡಲು ನಮಗೆ ಜನಾದೇಶ ನೀಡಿದ್ದಾರೆ”, ಎಂದು ಪೋಸ್ಟ್‌ ಮಾಡಿದ್ದಾರೆ. ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಿದ ಭಾರತದ ಜನರಿಗೆ ನಾನು ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ. ಇದೀಗ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ‘ಮೋದಿ ಕಾ ಪರಿವಾರ್’ ಅನ್ನು ತೆಗೆದುಹಾಕುವಂತೆ ವಿನಂತಿಸುತ್ತೇನೆ. ನೀವು ಇದನ್ನು ಬದಲಾಯಿಸಬಹುದು. ಆದರೆ ಭಾರತದ ಪ್ರಗತಿಗಾಗಿ ಶ್ರಮಿಸುತ್ತಿರುವ ಒಂದು ಪರಿವಾರವಾಗಿ ನಮ್ಮ ಬಂಧ ಯಾವಾಗಲೂ ಬಲವಾಗಿ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here