ಬಿ.ಎಸ್ ವೈ ಗೆ ಬಿಗ್‌ ರಿಲೀಫ್‌ – ಬಂಧಿಸಿ ತನಿಖೆಗೊಳಪಡಿಸುವ ಅಗತ್ಯವಿಲ್ಲ – ಹೈಕೋರ್ಟ್

ಮಂಗಳೂರು(ಬೆಂಗಳೂರು): ತಮ್ಮ ವಿರುದ್ಧದ ಪೊಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಿಗ್​ ರಿಲೀಫ್​ ಸಿಕ್ಕಿದೆ.  ಬಿ ಎಸ್‌ ವೈ ಅವರನ್ನು ಬಂಧಿಸಿ ತನಿಖೆಗೊಳಪಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.

ಪೊಲೀಸರು ಸಲ್ಲಿಸಿದ್ದ ಅರ್ಜಿ ಮನ್ನಿಸಿದ ಕೋರ್ಟ್ ಯಡಿಯೂರಪ್ಪಗೆ ಬಂಧನದ ವಾರೆಂಟ್ ಜಾರಿಗೊಳಿಸಿತ್ತು. ಇನ್ನು ಕೇಸ್ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ಎಸ್​ ದೀಕ್ಷಿತ್​​​​​ರವರ ಏಕಸದಸ್ಯ ಪೀಠ ಸಿಆರ್​ಪಿಸಿ 41ಎ ಅಡಿ ಮಾ.28ರಂದು ಪೊಲೀಸರು ನೋಟಿಸ್ ನೀಡಿದ್ದರು. ಅದರಂತೆ ಏ.12ರಂದು ಬಿಎಸ್​ವೈ ವಿಚಾರಣೆಗೆ ಹಾಜರಾಗಿದ್ದರು. 2ನೇ ನೋಟಿಸ್​ಗೆ ಅವರು ಹಾಜರಾಗಿಲ್ಲ. ಜೂ.17ರಂದು ಹಾಜರಾಗುವುದಾಗಿ ಬಿಎಸ್​ವೈ ಉತ್ತರಿಸಿದ್ದಾರೆ. ಹೀಗಾಗಿ ಬಂಧಿಸಿ ತನಿಖೆಗೊಳಪಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಎಫ್ಐಆರ್ ನಂತರ ತನಿಖೆ ಯಾವಾಗ ಆರಂಭವಾಯಿತು ಎಂದು ಹೈಕೋರ್ಟ್ ಪ್ರಶ್ನಿಸಿದ್ದು, ಮಾರ್ಚ್ 14ರ ಎಫ್ಐಆರ್ ನಂತರ ಏ.12ರಂದು ನೋಟಿಸ್ ನೀಡಿದ್ದಾರೆ. ಅಲ್ಲಿಯವರೆಗೆ ಪೊಲೀಸರು ಏನು ಮಾಡಿದರೆಂಬುದು ತಿಳಿದಿಲ್ಲ ಎಂದು ಸಿ.ವಿ.ನಾಗೇಶ್ ವಾದಿಸಿದರು.

ಈಗ ಬಿಎಸ್​ವೈ ಬಂಧನ ಏಕೆ ಬೇಕಾಗಿದೆ ಎಂದು ಹೈಕೋರ್ಟ್ ಮರು ಪ್ರಶ್ನಿಸಿದ್ದು, ಜೂನ್ 12ರಂದು ಹಾಜರಾಗುವಂತೆ ಬಿಎಸ್​ವೈಗೆ ನೋಟಿಸ್ ನೀಡಲಾಗಿತ್ತು. ಮೊಬೈಲ್‌ನಲ್ಲಿದ್ದ ವಿಡಿಯೋ, ಧ್ವನಿ ಪರೀಕ್ಷೆ ನಂತರ ನೋಟಿಸ್ ನೀಡಲಾಯಿತು. ಹಾಜರಾಗದ ಕಾರಣಕ್ಕೆ ಬಂಧನದ ವಾರಂಟ್ ಪಡೆಯಲಾಗಿದೆ. ಮೇ.13ರಂದು ಎಫ್ಎಸ್ಎಲ್ ವರದಿ ಬಂದಿದೆ. ಸುಟ್ಟ ಮೊಬೈಲ್ ಚಿಪ್​ನಲ್ಲಿದ್ದ ಡಾಟಾ ತೆಗೆಯಲು ಗುಜರಾತ್ FSLಗೆ ಕಳುಹಿಸಲಾಯಿತು. ಅದಾದ ನಂತರ ಧ್ವನಿ ಪರೀಕ್ಷೆಗೆ ಬೆಂಗಳೂರು ಎಫ್ಎಸ್ಎಲ್​ಗೆ ಕಳುಹಿಸಲಾಯಿತು ಎಂದು ಹೈಕೋರ್ಟ್​​​ಗೆ ಎಡಿಜಿಪಿ ಬಿ.ಕೆ.ಸಿಂಗ್ ಹೇಳಿದ್ದಾರೆ. ಬಿಎಸ್​​​ವೈ ಮನೆಯಲ್ಲಿಯೇ ಈ ಘಟನೆ ನಡೆದಿದೆ. ಅವರ ಮನೆಯಲ್ಲಿನ ಸಿಸಿ ಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ. ತನಿಖೆ ಹೇಗೆ ನಡೆಸಬೇಕೆಂಬುದನ್ನ ತನಿಖಾಧಿಕಾರಿ ನಿರ್ಧರಿಸಬೇಕು ಎಂದು ಹೈಕೋರ್ಟ್ ಹೇಳಿದೆ.

LEAVE A REPLY

Please enter your comment!
Please enter your name here