ಡಾ. ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆ – ರಕ್ತದಾನ ಶಿಬಿರ

ಮಂಗಳೂರು: ಮಂಗಳೂರಿನ ಡಾ. ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್‍ನ ಸಂಸ್ಥಾಪಕರ ದಿನಾಚರಣೆಯನ್ನು ನಗರದ ವಿದ್ಯಾನಗರದ ಡಾ.ಎಂ.ವಿ.ಶೆಟ್ಟಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ನಿರ್ವಾಹಕರು, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ರಕ್ತದಾನ ಮೂಲಕ ಒಬ್ಬರ ಜೀವ ಉಳಿಸಲು ಸಾಧ್ಯ, ಹಾಗಾಗಿ ನಾವೆಲ್ಲರೂ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಟ್ರಸ್ಟಿ ಡಾ.ರಂಜಿತ್ ಶೆಟ್ಟಿ ಮಾತನಾಡಿ, ಇಂತಹ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿರುವುದಕ್ಕೆ ಸಂಸ್ಥೆಯ ನಿರ್ವಾಹಕರು, ಪ್ರಾಧ್ಯಾಪಕರು, ಸಿಬ್ಬಂದಿಗಳಿಗೆ ಅಭಾರಿಯಾಗಿದ್ದೇವೆ. ಇದೊಂದು ಉತ್ತಮವಾದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಟ್ರಸ್ಟಿ ಪ್ರೊ.ಡಾ. ಹಿಮಾ ಊರ್ಮಿಳಾ ಶೆಟ್ಟಿ ಮಾತನಾಡಿ ಡಾ. ರಾಮ್‍ಗೋಪಾಲ್ ಅವರು ಎಲ್ಲರೊಂದಿಗೆ ಉತ್ತಮವಾದ ಒಡನಾಟ ಇಟ್ಟುಕೊಂಡಿದ್ದರು. ಅವರ ಕಾರ್ಯವೈಖರಿಯೂ ನಿಜಕ್ಕೂ ಶಾಘ್ಲನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ವಾತ್ಸಲ್ಯ ಪ್ರಾಣಿ ಸಂರಕ್ಷಣಾ ಟ್ರಸ್ಟ್ ಗೆ ಅಗತ್ಯ ಸಲಕರಣೆ, ಆಹಾರ, ಜೌಷಧಿಗಳು, ಮೈಕ್ರೋಸ್ಕೋಪ್ ಗಳನ್ನು ಸಂಸ್ಥೆಯ ಮತ್ತೋರ್ವ ಟ್ರಸ್ಟಿ ಡಾ. ದಿವ್ಯಾಂಜಲಿ ಶೆಟ್ಟಿ ಹಸ್ತಾಂತರಿಸಿದರು. ಇದೇ ವೇಳೆ
ಸಂಸ್ಥೆಯು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 13 ಭಾರತೀಯ ನಕ್ಷತ್ರ ಆಮೆಗಳನ್ನು ದತ್ತು ಪಡೆದಿರುವುದಾಗಿ ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ಆಫ್ ನರ್ಸಿಂಗ್‍ನ ಪ್ರಾಂಶುಪಾಲೆ ಡಾ. ಪದ್ಮಪ್ರಿಯಾ ಎಸ್ ಅವರು ಸ್ವಾಗತಿಸಿದರು. ಅಲೈಡ್ ಹೆಲ್ತ್‌ ಸೈನ್ಸ್ ಪ್ರಾಂಶುಪಾಲೆ ‌ಪ್ರೊ. ಶ್ರೀಪ್ರಿಯಾ ವಂದಿಸಿದರು. ಪ್ರೊ. ಶೃತಿ.ಎಸ್ ಕಾರ್ಯಕ್ರಮ ನಿರೂಪಿಸಿದರು.ಟ್ರಸ್ಟ್ ನ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.

 

 

LEAVE A REPLY

Please enter your comment!
Please enter your name here