



ಮಂಗಳೂರು (ದೆಹಲಿ):18ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಇಂದು(ಜೂ.24) ಆರಂಭಗೊಂಡಿದೆ. ದ.ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ಲೋಕಸಭೆಗೆ ಹೊಸದಾಗಿ ಚುನಾಯಿತರಾದ 280 ಸಂಸದರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೇಸರಿ ಶಲ್ಯಧರಿಸಿ ಬಂದ ಕ್ಯಾ. ಬ್ರಿಜೇಶ್ ಚೌಟ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನದ ಕೊನೆಯಲ್ಲಿ “ಮಾತೆರೆಗ್ಲ ಸೊಲ್ಮೆಲು” ಎಂದು ಹೇಳುವ ಮೂಲಕ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇಧದಲ್ಲಿ ಸೇರಿಸಬೇಕೆನ್ನುವ ಬಹುಕಾಲದ ಬೇಡಿಕೆಗೆ ಪೀಠಿಕೆ ಬರೆದಿದ್ದಾರೆ.



















