ಮಂಗಳೂರು/ಕಾಸರಗೋಡು: ಪುರುಷ ಮತ್ತು ಮಹಿಳೆಯ ಮೃತದೇಹ ವಸತಿಗೃಹದಲ್ಲಿ ಪತ್ತೆಯಾದ ಘಟನೆ ಕಾಸರಗೋಡು ನಗರದ ವಸತಿಗೃಹದಲ್ಲಿ ನಡೆದಿದೆ. ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನೆಲ್ಲಿಕಟ್ಟೆ ಯ ಫಾತಿಮಾ (42) ಹಾಗೂ ಚೆಂಗಳ ರಹಮತ್ ನಗರದ ಕೆ . ಹುಸೈನಾರ್ ( 33) ಮೃತಪಟ್ಟವರು.ಎರಡು ದಿನಗಳ ಹಿಂದೆ ಮೃತ ಪಟ್ಟಿರಬಹುದು ಹಾಗೂ ಮಹಿಳೆಯನ್ನು ಕೊಲೆಗೈದು ಯುವಕ ಆತ್ಮಹತ್ಯೆ ಗೈದಿರಬಹುದು ಎಂದು ಶಂಕಿಸಲಾಗಿದೆ.ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಗರದಲ್ಲಿರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫಾತಿಮಾಳು ಪತಿ ಮತ್ತು ಮಕ್ಕಳನ್ನು ತೊರೆದು ಕಳೆದ ನಾಲ್ಕು ವರ್ಷಗಳಿಂದ ಹುಸೈನಾರ್ ಜತೆ ವಾಸವಾಗಿದ್ದಳು ಎಂದು ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಕಾಸರಗೋಡು ಹಾಗೂ ಹೊಸದುರ್ಗ ಠಾಣಾ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.