ನೀಟ್ ಅವ್ಯವಹಾರ: ಎನ್ ಎಸ್ ಯು ಐ, ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು; ನೀಟ್ ಅವ್ಯವಹಾರ ಖಂಡಿಸಿ, ವಿಶೇಷ ತನಿಖೆಗೆ ಆಗ್ರಹಿಸಿ ಮಂಗಳೂರಿನಲ್ಲಿ ಎನ್ ಎಸ್ ಯು ಐ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಮಾಜಿ ಸಚಿವ ರಮಾನಾಥ ರೈ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಪ್ರಮುಖರಾದ ಪದ್ಮರಾಜ್ ಪೂಜಾರಿ, ಸುಹಾನ್ ಆಳ್ವ, ಪ್ರವೀಣ್ ಚಂದ್ರ ಆಳ್ವ, ಶಶಿಧರ ಹೆಗ್ಡೆ ಸವದ್ ಸುಳ್ಯ , ಎಂ ಜಿ ಹೆಗ್ಡೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಈ ವೇಳೆ ಮಾತನಾಡಿದ ಪದ್ಮರಾಜ್ ಆರ್.ಪೂಜಾರಿ  ಸೀಟ್ ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯ ಕುತಂತ್ರ ನಡೆದಿದೆ. ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪರ ಸದನದಲ್ಲಿ ಮಾತನಾಡಿದಾಗ ಮೈಕ್ ಬಂದ್ ಮಾಡಲಾಗಿದೆ. ಇದು ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ತೋರಿಸಿದ ಅಗೌರವ ಎಂದು ಕಿಡಿಕಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಇದು ದೇಶದ ದೊಡ್ಡ ಹಗರಣ. ಇದರ ಬಗ್ಗೆ ರಾಹುಲ್ ಗಾಂಧಿ ಮೊದಲ ಬಾರಿಗೆ ಧ್ವನಿ ಎತ್ತಿದ್ದರು. ಇದುವರೆಗೂ ಪ್ರಧಾನಮಂತ್ರಿ ಉತ್ತರ ಕೊಟ್ಟಿಲ್ಲ.ಹಗರಣದಿಂದಾಗಿ ಮಕ್ಕಳು, ಹೆತ್ತವರು ಆತಂಕಿತರಾಗಿದ್ದಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here