ಉತ್ತರಾಖಂಡದಲ್ಲಿ ತಾತ್ಕಾಲಿಕ ಸೇತುವೆ ಕುಸಿತ – ನದಿಯಲ್ಲಿ ಕೊಚ್ಚಿ ಹೋದ ಪ್ರವಾಸಿಗರು

ಮಂಗಳೂರು/ಉತ್ತರಾಖಂಡ: ಉತ್ತರಾಖಂಡದ ಗಂಗೋತ್ರಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿದೆ.

ಪರಿಣಾಮ ಸುಮಾರು 30ರಿಂದ 40 ಯಾತ್ರಿಕರು ನದಿಯಂಚಿನಲ್ಲಿ ಸಿಲುಕಿಕೊಂಡಿದ್ದು, ಇಬ್ಬರು ನದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಗಂಗೋತ್ರಿಯ ದೇವಗಡದ ಬಳಿ ನದಿ ನೀರು ಹಠಾತ್ ಹೆಚ್ಚಾಗಿದೆ. ನೀರು ಸೇತುವೆಯ ಮೇಲೆ ರಭಸವಾಗಿ ಹರಿದ ಪರಿಣಾಮ, ಸೇತುವೆ ಕುಸಿದಿದೆ. ಇಬ್ಬರು ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ಸಿಲುಕಿಕೊಂಡಿದ್ದವರಲ್ಲಿ 16 ಮಂದಿಯನ್ನು ಎಸ್‌ಡಿಆರ್‌ಎಫ್‌ ತಂಡ ರಕ್ಷಿಸಿದೆ. ಉಳಿದವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here