ಮಂಗಳೂರು: ಇಲ್ಲೊಬ್ಬ ಯುವಕ ರೀಲ್ಸ್‌ಗಾಗಿ ಅಬ್ಬರಿಸುವ ಅಲೆಗಳ ನಡುವೆ ಸ್ಕೂಟರ್ ಜೊತೆಗೆ ನೀರಿಗೆ ಇಳಿದಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕನ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡೋದು ಹೊಸ ಟ್ರೆಂಡ್ ಆಗಿದೆ. ರೀಲ್ಸ್ ಹೆಸರಲ್ಲಿ ಯುವ ಸಮುದಾಯ ಮಾಡ್ತಿರೋ ಹುಚ್ಚಾಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಈಗಾಗಲೇ ಈ ರೀಲ್ಸ್ ಹುಚ್ಚಾಟಕ್ಕೆ ತಮ್ಮ ಪ್ರಾಣ ಕಳೆದುಕೊಂಡವರು ಕೆಲವರಾದರೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ನಡುವೆ ರೀಲ್ಸ್ ಸಾಹಸಕ್ಕಾಗಿ ಸ್ಕೂಟರ್ ನೊಂದಿಗೆ ದೊಡ್ಡ ಗಾತ್ರದ ಅಲೆಗಳ ನಡುವೆ ಸಮುದ್ರಕ್ಕೆ ಇಳಿದ ವಿಡಿಯೋ ನೋಡಿದರೆ ಮೈ ಜುಮ್ಮ್ ಎನ್ನುತ್ತದೆ.
ದ ಫಿಜೆನ್ ಎನ್ನುವ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಗೂಗಲ್ ಮ್ಯಾಪ್ ನಂಬಿ ಹೋದರೆ ಹೀಗೆ ಆಗೋದು ಎಂದು ಬರೆದುಕೊಳ್ಳಲಾಗಿದೆ. ಆದರೆ ಈ ವೀಡಿಯೋವನ್ನು ಯಾವಾಗ ಹಾಗೂ ಎಲ್ಲಿ ಚಿತ್ರೀಕರಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೆ ವೈರಲ್ ಆಗಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್ ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ. ನೆಟ್ಟಿಗರು ಈತನ ವಿರುದ್ಧ ಗರಂ ಆಗುವ ಮೂಲಕ ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅದಲ್ಲದೇ ಈ ರೀತಿಯ ಸಾಹಸಕ್ಕೆ ಯಾರೂ ಕೈ ಹಾಕಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
When you pay attention to Google Maps.
— Figen (@TheFigen_) July 1, 2024