ಮಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾತನಾಡಿದ ವಿಪಕ್ಷ ಮುಖ್ಯ ಸಚೇತಕ ಎಂ ಎಲ್ ಸಿ ರವಿ ಕುಮಾರ್, ಸಿದ್ದರಾಮಯ್ಯ ರಾಜೀನಾಮೆಗೆ ಅಗ್ರಹಿಸಿದ್ದಾರೆ.
ಮೂಡ ಹಗರಣ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ರವಿ ಕುಮಾರ್ ಮುಖ್ಯಮಂತ್ರಿಗಳು ಸಮಾಜವಾದದಿಂದ ಬಂದವರು. ನನಗೂ ಭ್ರಷ್ಟಾಚಾರಕ್ಕೂ ಸಾಸಿವೆ ಕಾಳಷ್ಟು ಸಂಬಂಧ ಇಲ್ಲ ಎಂದವರು.ಅಂತಾ ಸಿದ್ದರಾಮಯ್ಯ ಸಮಾಜವಾದಕ್ಕೆ ತಿಲಾಂಜಲಿ ಇಟ್ಟು, ಪತ್ನಿ ಹೆಸರಲ್ಲಿ 14 ಸೈಟು ಮಾಡಿಕೊಡ್ತಾರೆ. 35 ಕೋಟಿ ಕೊಟ್ಟು 14 ಸೈಟು ತಗೋಳ್ತಾರೆ ಅಂದ್ರೆ ಅವರಿಗೆ ಯಾವ ನೈತಿಕತೆ ಇದೆ. ನೀವು ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ನಿಮ್ಮ ಸಮಾಜವಾದ ಆದರ್ಶ ಎಲ್ಲಿ ಹೋಯ್ತು? ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಎಸ್ ಸಿ ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟ ಹಣ ಹೇಗೆ ಗ್ಯಾರಂಟಿಗೆ ಬಳಸುತ್ತೀರಾ? ಎಸ್ ಸಿ,ಎಸ್ಟಿ ಗಳಿಗೆ,ದಲಿತರಿಗೆ ಮಹಾ ದ್ರೋಹ ಮಾಡಿದ ಸಿಎಂ ಎಂದರೆ ಅದು ಸಿದ್ದರಾಮಯ್ಯ. ಬಹಳ ಬುದ್ಧಿವಂತರಾದ ಸಿದ್ದರಾಮಯ್ಯ, ಆರ್ಥಿಕ ತಜ್ಞ ಎಂದು ಹೇಳಿಕೊಳ್ಳೋ ಸಿದ್ದರಾಮಯ್ಯ. 4ರಿಂದ 5 ಲಕ್ಷ ಬೆಲೆ ಬಾಳೊ ಜಮೀನನ್ನು ನೀವು ಮುಡಾಕ್ಕೆ ಕೊಟ್ಟು, 62 ಕೋಟಿ ರೂಪಾಯಿ ಕೇಳ್ತಾ ಇದ್ದಾರೆ.
ಇಡೀ ರಾಜ್ಯದಲ್ಲಿ ಈ ಹಿಂದೆ ರೈತರು ಕಡಿಮೆ ಬೆಲೆಗೆ ಜಮೀನನ ಕೊಟ್ಟಿದ್ದಾರೆ. ಈಗ ಅದು ಕೋಟ್ಯಂತರ ಮೌಲ್ಯದ ಫ್ಲಾಟ್ ಸೈಟ್ ಆಗಿ ಪರಿವರ್ತನೆಯಾಗಿದೆ. ಈಗ ಆ ಎಲ್ಲಾ ರೈತರು ಕೇಳಿದ್ರೆ ಕೋಟಿ ಕೊಡ್ತೀರಾ?.ನೀವು ಭ್ರಷ್ಟ ಮುಖ್ಯಮಂತ್ರಿಯಾಗಿದ್ದೀರಿ, ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನ ಬೇರೆ ರಾಜ್ಯದ ಚುನಾವಣೆಗೆ ಬಳಸಿಕೊಂಡಿದ್ದೀರಿ. 700 ಅಕೌಂಟ್ ಗಳಿಗೆ ಹಣ ಸಂದಾಯ ಮಾಡಿ ಡ್ರಾ ಮಾಡಿಸಿದ್ದೀರಿ. ವಾಲ್ಮೀಕಿ ನಿಗಮದ ಹಗರಣದ ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ನೀವು ಈಗ ಸೈಟ್ ಗಳಲ್ಲಿ ಭ್ರಷ್ಟಾಚಾರ ಮಾಡಿದ್ದೀರ.ನೀವು ರಾಜೀನಾಮೆ ಕೊಟ್ಟು ಮಾತನಾಡಿ ಎಂದು ಹೇಳಿದ್ದಾರೆ.