ಮಂಗಳೂರು/ಕಾಸರಗೋಡು: ಶೂ ಧರಿಸಿದ್ದಾನೆ ಎಂಬ ಕಾರಣಕ್ಕೆ ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವನನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅತಿ ಕ್ರೂರವಾಗಿ ರ‍್ಯಾಗಿಂಗ್ ನಡೆಸಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಚಿತ್ತಾರಿಯಲ್ಲಿ ನಡೆದಿದೆ.
ಚಿತ್ತಾರಿ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಪಳ್ಳಿಕೆರೆಯ ಬಿಲಾಲ್ ನಗರದ ಹುಡುಗ ರ‍್ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಶೂ ಧರಿಸಿ ಕಾಲೇಜಿಗೆ ಬಂದ ವಿಚಾರವಾಗಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಯನ್ನು ರ‍್ಯಾಗಿಂಗ್ ಮಾಡಿದ್ದಾರೆ. ಬಳಿಕ ಕಾಲೇಜಿನ ಸಮೀಪದ ಬಸ್‌ಸ್ಟಾಂಡ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಆತನ ಬಳಿ ಹಾಡು ಹಾಡಲು ಹೇಳಿದ್ದಾರೆ. ಇದನ್ನು ತಿರಸ್ಕರಿಸಿದಾಗ ಹಿರಿಯ ವಿದ್ಯಾರ್ಥಿಗಳು ಗುಂಪು ಕಟ್ಟಿ ಗಂಭೀರ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಹಲ್ಲೆಯಿಂದಾಗಿ ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಹಾನಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.