ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್-50 ವರ್ಷ ಮೀರಿದ ಶಿಕ್ಷಕರಿಗೆ ಸಿಹಿ ಸುದ್ದಿ- ವರ್ಗಾವಣೆಯಿಂದ ವಿನಾಯಿತಿ

ಮಂಗಳೂರು/ಬೆಂಗಳೂರು: 50 ವರ್ಷ ಮೀರಿದ ಮಹಿಳಾ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಶಿಕ್ಷಕರ ನಿಯಂತ್ರಣ ಮತ್ತು ವರ್ಗಾವಣೆ ಕಾಯ್ದೆಯ ನಿಯಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.

ಕರ್ನಾಟಕ ರಾಜ್ಯ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.50 ವರ್ಷ ದಾಟಿದ್ದ ಇಬ್ಬರು ಶಿಕ್ಷಕಿಯರನ್ನು ವರ್ಗಾವಣೆ ಮಾಡಿದ್ದ ಶಿಕ್ಷಣ ಇಲಾಖೆ ಆಯುಕ್ತರ ಆದೇಶವನ್ನು ರದ್ದುಮಾಡಿರುವ ಕರ್ನಾಟಕ ಹೈಕೋರ್ಟ್, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ  ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಶಿಕ್ಷಕರ ನಿಯಂತ್ರಣ ಮತ್ತು ವರ್ಗಾವಣೆ ಕಾಯ್ದೆ 2020ರ ಸೆಕ್ಷನ್ 10(1)(6)ರ ಪ್ರಕಾರ 50 ವರ್ಷ ದಾಟಿದ ಮಹಿಳಾ ಶಿಕ್ಷಕರು ಮತ್ತು 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ.ಪ್ರಕರಣದ ಪ್ರತಿವಾದಿಗಳು ಇಬ್ಬರು ಶಿಕ್ಷಕಿಯರಾಗಿದ್ದು, ಉಮಾದೇವಿ ಹುಂಡೇಕರ್ ಅವರಿಗೆ 55 ವರ್ಷ ದಾಟಿದೆ. ಇನ್ನೊಬ್ಬರು ಪ್ರಭಾವತಿ ರೋನದ್ ಅವರಿಗೆ 55 ವರ್ಷಗಳು ದಾಟಿದೆ. ಹೀಗಾಗಿ, ಶಿಕ್ಷಕರ ಕೋರಿಕೆ ಮೇರೆಗೆ ವರ್ಗಾವಣೆಯನ್ನು ರದ್ದುಪಡಿಸಿರುವ ಎಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್‌ನ ಆದೇಶ ಸರಿಯಾಗಿದ್ದು, ಈ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಯಾವುದೇ ಕಾರಣಗಳು ಕಂಡುಬರುತ್ತಿಲ್ಲ ಎಂದು ಹೇಳಿದೆ.

LEAVE A REPLY

Please enter your comment!
Please enter your name here