ತುರ್ತು ಸಂದರ್ಭಗಳಿಗಾಗಿ 2 ಹೊಸ ಸಹಾಯವಾಣಿ ಸಂಖ್ಯೆಗಳನ್ನ ಬಿಡುಗಡೆ ಮಾಡಿದ ಮೆಸ್ಕಾಂ

ಮಂಗಳೂರು: ಸಾರ್ವಜನಿಕರು ವಿದ್ಯುತ್‌ ಗೆ ಸಂಬಂಧಪಟ್ಟಂತೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ  ಸಹಾಯವಾಗುವ ನಿಟ್ಟಿನಲ್ಲಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಎರಡು ಹೊಸ ದೂರವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಮೆಸ್ಕಾಂನ 8277883388 ಅಥವಾ 0824-2950953 ಸಂಖ್ಯೆಗೆ ಕರೆ ಮಾಡಿ ತಮ್ಮ ದೂರುಗಳನ್ನು ನೀಡಬಹುದಾಗಿದೆ. ಈ ಸಂಖ್ಯೆಗಳನ್ನು ಗಂಭೀರ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸುವಂತೆ ಮೆಸ್ಕಾಂ ಸೂಚಿಸಿದೆ. ಇತರ ಸಾಮಾನ್ಯ ಸೇವೆಗಳಿಗೆ, ಉಚಿತ ಸಹಾಯವಾಣಿ 1912 ಮತ್ತು ಸ್ಥಳೀಯ ಕಚೇರಿ ಸ್ಥಿರ ದೂರವಾಣಿ ಸಂಖ್ಯೆಗಳನ್ನು ಬಳಸುವಂತೆ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here