ಎನಿ ವೇರ್‌ ರಿಜಿಸ್ಟ್ರೇಷನ್ ಶೀಘ್ರದಲ್ಲೇ ಜಾರಿ – ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹತ್ವದ ನಿರ್ಧಾರ

ಮಂಗಳೂರು(ಬೆಂಗಳೂರು): ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅತಿ ಶೀಘ್ರದಲ್ಲೇ ರಾಜ್ಯದಲ್ಲಿ ಎನಿ ವೇರ್‌ ರಿಜಿಸ್ಟ್ರೇಷನ್ ಜಾರಿಗೆ ಬರಲಿದೆ. ಇದುವರೆಗೆ ಆಸ್ತಿ ವರ್ಗಾವಣೆ ಹಾಗೂ ದಾಖಲಾತಿಗಳ ನೋಂದಣಿಯನ್ನು ಆಯಾ ಜಿಲ್ಲಾ ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನಡೆಸಲಾಗುತ್ತಿತ್ತು.

ವ್ಯಾಪ್ತಿ ಹೊರತುಪಡಿಸಿ ಬೇರಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳ ನೋಂದಣಿಗೆ ಅವಕಾಶ ಇರಲಿಲ್ಲ. ಈ ವ್ಯವಸ್ಥೆ ಬೆಂಗಳೂರನ್ನು ಹೊರತುಪಡಿಸಿದಂತೆ ರಾಜ್ಯದ ಎಲ್ಲೆಡೆ ಅನ್ವಯಿಸುತ್ತಿತ್ತು.ಜನರಲ್ ಪವರ್ ಆಫ್ ಅಟಾರ್ನಿ ಮತ್ತು ವೀಲುನಾಮೆಗೆ ಯಾವುದೇ ವ್ಯಾಪ್ತಿ ಇರಲಿಲ್ಲ. ಪಕ್ಷಕಾರರು ತಮಗೆ ಅನುಕೂಲವಾದ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಣಿ ಪ್ರಕ್ರಿಯೆಯನ್ನು ನಡೆಸಬಹುದಾಗಿತ್ತು. ಆದರೆ, ಈಗ ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹತ್ವದ ನಿರ್ಧಾರವೊಂದರಲ್ಲಿ ʼಎನಿ ವೇರ್‌ ರಿಜಿಸ್ಟ್ರೇಷನ್ʼ ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

ಈ ಮೂಲಕ ಜನರು ತಮಗೆ ಅನುಕೂಲವಾದ ಹಾಗೂ ತಮ್ಮ ಇಚ್ಚೆಗೆ ಅನುಸಾರ ರಾಜ್ಯದ ಯಾವುದೇ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ದಾಖಲೆಗಳನ್ನು ನೋಂದಣಿ ಮಾಡಬಹುದಾಗಿದೆ. ಈ ವ್ಯವಸ್ಥೆಯನ್ನು ಇಲಾಖೆ ಶೀಘ್ರದಲ್ಲೆ ಜಾರಿಗೆ ತರಲಿದೆ. ಹೆಚ್ಚಿನ ಮಾಹಿತಿಗೆ ಈ ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ: 080-68265316

LEAVE A REPLY

Please enter your comment!
Please enter your name here