ಬ್ಯಾಂಕ್‌ ಖಾತೆಗೆ ಇನ್ನುಮುಂದೆ ನಾಲ್ಕು ನಾಮಿನಿಗಳು – ಬ್ಯಾಂಕ್ ತಿದ್ದುಪಡಿ ಮಸೂದೆ ಮಂಡನೆ

ಮಂಗಳೂರು(ನವದೆಹಲಿ): ಬ್ಯಾಂಕಿಂಗ್ ಕಾನೂನುಗಳನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಸರ್ಕಾರ ಆ.9ರಂದು ಪರಿಚಯಿಸಿದ್ದು, ಇದು ನಾಮನಿರ್ದೇಶನ ಸೌಲಭ್ಯವನ್ನು ಹೆಚ್ಚು ಗ್ರಾಹಕ ಸ್ನೇಹಿಯನ್ನಾಗಿ ಮಾಡಲು ಬದಲಾವಣೆ ಸಹಿತ ಹಲವು ತಿದ್ದುಪಡಿಗಳು ಮಾಡಲಾಗಿದೆ.

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ತಿದ್ದುಪಡಿಯಿಂದ ಬ್ಯಾಂಕ್‌ ಖಾತೆದಾರರು ಏಕಕಾಲದಲ್ಲಿ ಗರಿಷ್ಠ ನಾಲ್ವರು ನಾಮಿನಿಗಳನ್ನು ಹೆಸರಿಸಬಹುದು. ಪ್ರತಿ ನಾಮಿನಿಗೂ 1ನೇ, 2ನೇ, 3ನೇ, 4ನೇ ಹೀಗೆ ಆದ್ಯತೆ ನೀಡಬಹುದು. ಜತೆಗೆ ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರ ಸೇವಾವಧಿ ವಿಸ್ತರಣೆ ಪ್ರಸ್ತಾವವೂ ಮಸೂದೆಯಲ್ಲಿದೆ.

ಇದರರ್ಥ ಮೊದಲ ನಾಮಿನಿಯ ನಾಮನಿರ್ದೇಶನವು ಠೇವಣಿ ಅಥವಾ ಖಾತೆದಾರನ ಮರಣದ ನಂತರ ಪರಿಣಾಮಕಾರಿಯಾಗಿರುತ್ತದೆ. ಎರಡನೇ ನಾಮಿನಿಯ ನಾಮನಿರ್ದೇಶನವು ಮೊದಲನೆಯವರ ಮರಣದ ನಂತರ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಅದು ಪ್ರಸ್ತಾಪಿಸಿದೆ.

LEAVE A REPLY

Please enter your comment!
Please enter your name here