ಏರ್‌ಪೋರ್ಟ್‌ನಲ್ಲಿ ಹಾವು-ಮುಂಗುಸಿ ಕಾಳಗ-ವಿಡಿಯೋ ವೈರಲ್

ಮಂಗಳೂರು/ಪಾಟ್ನಾ: ನಾಗರಹಾವು ಮತ್ತು ಮುಂಗುಸಿಯನ್ನು ಆಜನ್ಮ ಶತ್ರುಗಳು.ಎರಡೂ ಎದುರು ಬದುರಾದರೆ ಯಾವುದೇ ಕ್ಷಣದಲ್ಲೂ ಅಲ್ಲೊಂದು ಘನಘೋರ ಯುದ್ಧ ನಡೆಯುವುದು ಪಕ್ಕ.ಈ ಪರಮ ವೈರಿಗಳ ಕಾದಾಟದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪಾಟ್ನಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಮೂರು ಮುಂಗುಸಿ ಹಾಗು ಒಂದು ಹಾವಿನ ನಡುವೆ ನಡೆದ ಕಾಳಗ ವಿಡಿಯೋದಲ್ಲಿದ್ದು ವೀಕ್ಷಕರ ಗಮನ ಸೆಳೆದಿದೆ.ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, “ಪಾಟ್ನಾ ಏರ್‌ಪೋರ್ಟ್‌ ರನ್‌ವೇಯಲ್ಲಿ ಹಾವು ಮತ್ತು  ಮುಂಗುಸಿ ಆಟ ಶುರು ”‌ ಎಂಬ ಶೀರ್ಷಿಕೆಯಲ್ಲಿ ವೈರಲ್‌ ಆಗುತ್ತಿದೆ.

LEAVE A REPLY

Please enter your comment!
Please enter your name here