ದೆಹಲಿಯಲ್ಲಿ 77ನೇ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಲು ದ.ಕನ್ನಡದ ಮೂವರಿಗೆ ಆಮಂತ್ರಣ

ಮಂಗಳೂರು: ಆಗಸ್ಟ್ 15 ರಂದು ನವದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ದ.ಕನ್ನಡದ ಓರ್ವ ವಿದ್ಯಾರ್ಥನಿ, ಶಿಕ್ಷಕಿ ಮತ್ತು ಗ್ರಾ.ಪಂ ಅಧ್ಯಕ್ಷೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಶಕ್ತಿನಗರ ನಾಲ್ಯಪದವು ಕುವೆಂಪು ಕೇಂದ್ರೀಯ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪೂರ್ವಿ ಯು. ಶೆಟ್ಟಿ ಹಾಗೂ ಅದೇ ಶಾಲೆಯ ಶಿಕ್ಷಕಿ ಶ್ವೇತಾ ಕೆ ಅವರಿಗೆ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಲು ಆಮಂತ್ರಣ ದೊರಕಿದೆ.

ಕರ್ನಾಟಕದ ಗ್ರಾ. ಪಂಚಾಯತ್‌ಗಳ ಆರು ಮಹಿಳಾ ಅಧ್ಯಕ್ಷರನ್ನು ಸ್ವಾತಂತ್ರ‍್ಯ ದಿನಾಚರಣೆಗೆ ಆಹ್ವಾನಿಸಲಾಗಿದ್ದು, ಪೆರುವಾಯಿ ಗ್ರಾಮ ಪಂಚಾಯಿತ್ ಅಧ್ಯಕ್ಷೆ ನೆಫೀಸಾ ಅವರಿಗೂ ಆಮಂತ್ರಣ ದೊರಕಿದೆ.

ನವದೆಹಲಿಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯ ಪರೇಡ್‌ನಲ್ಲಿ ಭಾಗವಹಿಸಲು ನನಗೆ ಸಂತೋಷವಾಗಿದೆ. ಈ ಅವಕಾಶದ ಕನಸು ಕೂಡ ನಾನು ಕಂಡಿರಲಿಲ್ಲ. ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಖುದ್ದಾಗಿ ವೀಕ್ಷಿಸುವುದು ದೊಡ್ಡ ಗೌರವವಾಗಿದೆ ಎಂದು ವಿದ್ಯಾರ್ಥಿನಿ ಪೂರ್ವಿ ಯು. ಪ್ರತಿಕ್ರಯಿಸಿದ್ದಾರೆ. ಇನ್ನು ಶಾಲೆಯ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಮಾತಬಾಡಿ ನಮ್ಮ ಶಾಲೆಯ ವಿದ್ಯಾರ್ಥಿ ಮತ್ತು ಶಿಕ್ಷಕರ ಆಯ್ಕೆ ಪ್ರಗತಿಯ ಸಂಕೇತವಾಗಿದೆ. ಪೂರ್ವಿ ಮತ್ತು ಶ್ವೇತಾಗೆ ಇದೊಂದು ಸುವರ್ಣಾವಕಾಶ. ನಮ್ಮ ಶಾಲೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ನಮಗೆ ನಿಜಕ್ಕೂ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ನೆಫೀಸಾ  ಕಳೆದ ಒಂದು ವರ್ಷದಿಂದ ಗ್ರಾಮ ಪಂಚಾಯಿತ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತ್ಯಾಜ್ಯ ಸಂಗ್ರಹಿಸುವ ವಾಹನ ಓಡಿಸಿ ಗಮನ ಸೆಳೆದಿದ್ದರು. ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ನೆಫೀಸಾ ಅವರನ್ನು ಸನ್ಮಾನಿಸಿದ್ದರು. ರಸ್ತೆಗಳು, ಎಡಬ್ಲ್ಯೂಸಿ ಮತ್ತು ನರೇಗಾ ಯೋಜನೆಗಳಂತಹ ಅಭಿವೃದ್ಧಿ ಕಾರ್ಯಗಳಲ್ಲಿ ಅವರು ಶ್ರಮಿಸಿದ್ದಾರೆ.

LEAVE A REPLY

Please enter your comment!
Please enter your name here