ಮಂಕಿ ಫಾಕ್ಸ್ ಹೆಸರಿನ ಮಹಾಮಾರಿ ಎಂಟ್ರಿ -116 ದೇಶದಲ್ಲಿ ಹಬ್ಬಿದ ವೈರಸ್

ಮಂಗಳೂರು(ಅಮೇರಿಕಾ): ವಿಶ್ವವನ್ನೇ ನಡುಗಿಸಿದ್ದ ಕೊರೋನಾ ನಂತರ ಈಗ ಮತ್ತೊಂದು ಮಹಾಮಾರಿ ವೈರಸ್ ಜಗತ್ತನ್ನು ತಲ್ಲಣಗೊಳಿಸಲು ತಯಾರಾಗಿದೆ. ಮಂಕಿ ಫಾಕ್ಸ್ ಹೆಸರಿನ ವೈರಸ್ ಜಗತ್ತಿನ 116 ದೇಶಗಳಲ್ಲಿ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.

ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯು ಅಂತರರಾಷ್ಟ್ರೀಯ ಆರೋಗ್ಯ ಕಾನೂನಿನಡಿಯಲ್ಲಿ ಅತ್ಯುನ್ನತ ಮಟ್ಟದ ಎಚ್ಚರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

13 ದೇಶಗಳಲ್ಲಿ ಈಗಾಗಲೇ ಮಂಕಿ ಫಾಕ್ಸ್ ವೈರಸ್ ಗಳು ಪತ್ತೆಯಾಗಿದ್ದು, ಇನ್ನಿತರ ದೇಶಗಳಿಗೆ ಈ ವೈರಸ್ ಹಬ್ಬುತ್ತಿದೆ. ಈ ಹೊಸ ರೂಪದ ವೈರಸ್ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ಮಂಕಿಪಾಕ್ಸ್ ಎಂದು ಕರೆಯುವ ಎಂಪಾಕ್ಸ್ ವೈರಸ್‌ನಿಂದ ಉಂಟಾಗುವ ಕಾಯಿಲೆಯಾಗಿದೆ. ಈ ವೈರಸ್‌ ದೇಹವನ್ನು ಪ್ರವೇಶಿಸಿದರೆ, ಜ್ವರ, ಶೀತ ಮತ್ತು ಸ್ನಾಯು ನೋವುಗಳಂತಹ ರೋಗಲಕ್ಷಣಗಳು ಕಂಡು ಬರುತ್ತವೆ. ನಂತರ ದದ್ದುಗಳು, ನೀರುಗುಳ್ಳೆಯಂತಹ ಗುಳ್ಳೆಗಳು ಕೂಡ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ವೈರಸ್ ನಿಕಟ ಮತ್ತು ಚರ್ಮದಿಂದ ಚರ್ಮದ ಸಂಪರ್ಕದ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಸೀನುವಾಗ ಮತ್ತು ಕೆಮ್ಮುವಾಗ ಸೋಂಕಿತ ಉಸಿರಾಟದ ಮೂಲಕವೂ ಹರಡುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ವ್ಯಕ್ತಿಗಳಿಗೆ ಸೋಂಕು ತಗಲುವ ಕಾರಣ ರೋಗದ ಭೀತಿ ಹೆಚ್ಚಾಗಿದೆ.

ಮಂಕಿ ಫಾಕ್ಸ್ ವೈರಸ್ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅದು 2ರಿಂದ 4 ವಾರಗಳವರೆಗೆ ಇರುತ್ತದೆ. ಆದಾಗ್ಯೂ ಸೋಂಕಿನ ನಂತರದ 24-48 ಗಂಟೆಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಬುರುಂಡಿ, ಕೀನ್ಯಾ, ರುವಾಂಡಾ ಮತ್ತು ಉಗಾಂಡಾದಂತಹ ನೆರೆಯ ದೇಶಗಳಲ್ಲಿಯೂ ಇಂತಹ ಪ್ರಕರಣಗಳು ಕಂಡು ಬರುತ್ತಿದ್ದು, ಆರೋಗ್ಯ ತುರ್ತುಪರಿಸ್ಥಿತಿಯ ಭೀತಿ ಎದುರಾಗಿದೆ.

LEAVE A REPLY

Please enter your comment!
Please enter your name here