ಬಿ .ಸಿ.ರೋಡ್ ನಲ್ಲಿ ಮಟ್ಕಾ ದಂಧೆ – ಬಂಟ್ವಾಳ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ದಾಳಿ

ಮಂಗಳೂರು(ಬಂಟ್ವಾಳ): ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪದ್ಮಕಾಂಪ್ಲೆಕ್ಸ್ ಕಟ್ಟಡದ ತಳಭಾಗದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮಟ್ಕಾ ಕೇಂದ್ರಕ್ಕೆ ಬಂಟ್ವಾಳ ಉಪವಿಭಾಗದ ಡಿವೈಎಸ್‌ ಪಿ ವಿಜಯ್ ಪ್ರಸಾದ್ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, ಮಟ್ಕಾ ವ್ಯವಹಾರ ನಡೆಸುತ್ತಿದ್ದ ಸಜೀತ್ .ಕೆ ಪಾವೂರು, ವಿಶಾಲ್ ಸಿ.ಉಚ್ಚಿಲ್, ಸುನೀಲ್ ಕುಮಾರ್ ಎಂಬವರುಗಳನ್ನು ವಶಕ್ಕೆ ಪಡೆದಿದ್ದಾರೆ.

ದಂಧೆಗೆ ಬಳಸಿದ ವಿವಿಧ ಮುಖ ಬೆಲೆಯ ನೋಟುಗಳನ್ನು, ಕ್ಯಾಲ್ಕುಲೇಟರ್, ಪೆನ್ನುಗಳು, ಪುಸ್ತಕಗಳು, ಮೊಬೈಲ್ ಪೋನ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ 70,505/-ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 139/2024 ಕಲಂ: 78(3) KP act ರಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here