ಪುತ್ತೂರು/ಮಂಗಳೂರು: ಮಂಗಳೂರು ಜಿಲ್ಲಾ ಸರಕಾರಿ ಅಭಿಯೋಜಕರ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜರೋಹಣವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಜುಡಿತ್ ಒಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ನೆರವೇರಿಸಿದರು.
ಮಂಗಳೂರು ವಲಯ ಅಭಿಯೋಜನ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವಾ ಕೆ, ಕಾನೂನು ಅಧಿಕಾರಿ ಕಿರಿಯ ಆದ ಜಗದೀಶ್ ಕೃಷ್ಣ ಜಾಲಿ, ಶೋಭಾ ನಾಯ್ಕ್, ಸರ್ಕಾರಿ ಅಭಿಯೋಜಕರುಗಳಾದ ಜ್ಯೋತಿ ಪ್ರಮೋದ್ ನಾಯಕ್, ಮೋಹನ್ ಕುಮಾರ್ ಬಿ, ವಿಶೇಷ ಸರಕಾರಿ ಅಭಿಯೋಜಕ ರಾದ ಪುಷ್ಪರಾಜ್ ಅಡ್ಯಂತಾಯ , ಸಹನಾ ದೇವಿ, ಜಿಲ್ಲಾ ಸರಕಾರಿ ವಕೀಲರಾದ ರಾಮಕೃಷ್ಣ, ನವೀನ್ ಕುಮಾರ್, ಸಹಾಯಕ ಸರಕಾರಿ ಅಭಿಯೋಜಕರಾದ ಗೀತಾ ರೈ, ನೇತ್ರಾವತಿ, ಚೇತನಾ ದೇವಿ, ಸೇರಿದಂತೆ ಮಂಗಳೂರು ವಕೀಲರ ಸಂಘದ ಕಾರ್ಯದರ್ಶಿ, ಪದಾಧಿಕಾರಿಗಳು , ವಲಯ ಕಚೇರಿ ಹಾಗೂ ಸರ್ಕಾರಿ ಅಭಿಯೋಜಕರ ಕಚೇರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಸರ್ಕಾರಿ ಅಭಿಯೋಜಕರ ಕಚೇರಿ ಮೇಲ್ವಿಚಾರಕ ರವೀಂದ್ರ ಮತ್ತು ಸಿಬ್ಬಂದಿ ಕೃಷ್ಣ ಮೂರ್ತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಬಿ.ಪುತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.