ಅಮೇರಿಕಾದಲ್ಲಿ ಶೀತಗಾಳಿ – ವಿಮಾನ ಹಾರಾಟ ರದ್ದು

ವಾಷಿಂಗ್ಟನ್: ಅಮೆರಿಕದಲ್ಲಿ ತೀವ್ರ ಶೀತಗಾಳಿ ಬೀಸುತ್ತಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಸಾವಿರಕ್ಕೂ ಹೆಚ್ಚು ವಿಮಾನಗಳ ಯಾನ ರದ್ದುಪಡಿಲಾಗಿದೆ. ಸೋಮವಾರ ಸಂಜೆ 6 ಗಂಟೆವರೆಗೆ ಒಟ್ಟು 1019 ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ಈ ಪೈಕಿ ಅರ್ಧದಷ್ಟು ವಿಮಾನಗಳು ಸೌತ್‌ ವೆಸ್ಟ್‌ ಏರ್‌ ಲೈನ್ಸ್‌ ಕಂಪನಿಗೆ ಸೇರಿದ್ದಾಗಿದೆ.

ಸೌತ್‌ ವೆಸ್ಟ್‌ ಏರ್‌ ಲೈನ್ಸ್‌ ಕಂಪನಿ ಸೋಮವಾರದ ವೇಳಾಪಟ್ಟಿಯಲ್ಲಿ ಶೇಕಡ 12ರಷ್ಟು ವಿಮಾನಗಳ ಸಂಚಾರ ರದ್ದುಪಡಿಸಿದ್ದರೆ ಅಮೆರಿಕನ್ ಏರ್‌ಲೈನ್ಸ್ ಗ್ರೂಪ್ 200 ವಿಮಾನಗಳ ಹಾರಾಟ ರದ್ದಪಡಿಸಿದೆ. ಅಮೆರಿಕಕ್ಕೆ ಬರುವ ಹಾಗೂ ಹೊರಡುವ ವಿಮಾನಗಳು ಸೇರಿ ಮಂಗಳವಾರದ ವೇಳಾಪಟ್ಟಿಯಲ್ಲಿರುವ 797 ವಿಮಾನಗಳನ್ನು ರದ್ದಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

LEAVE A REPLY

Please enter your comment!
Please enter your name here