ಧಾರ್ಮಿಕ ಪ್ರವಾಸೋದ್ಯಮ- ದುಬೈನಲ್ಲಿ ವಿಶ್ವದ ಮೊದಲ ತೇಲುವ ಮಸೀದಿ ನಿರ್ಮಾಣ

ಮಂಗಳೂರು (ದುಬೈ): ಇಸ್ಲಾಮಿಕ್ ವ್ಯವಹಾರಗಳು ಮತ್ತು ದತ್ತಿ ಚಟುವಟಿಕೆಗಳ ಇಲಾಖೆ ದುಬೈನಲ್ಲಿ ಧಾರ್ಮಿಕ ಪ್ರವಾಸೋದ್ಯಮ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದು, ಈ ಉದ್ದೇಶಕ್ಕಾಗಿ ಹಲವಾರು ಯೋಜನೆಗಳು, ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ದುಬೈಯನ್ನು ವಿಶ್ವದ ಅತಿ ಹೆಚ್ಚು ಜನರು ಭೇಟಿ ನೀಡುವ ನಗರವನ್ನಾಗಿ ಮಾಡುವ ಕಾರ್ಯತಂತ್ರದ ಭಾಗವಾಗಿ  ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಯೋಜನೆಯು ಪ್ರವಾಸಿಗರ ಸಂಖ್ಯೆಯನ್ನು ಶೇಕಡಾ 3-4 ರಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಅಹ್ಮದ್ ಖಲ್ಫಾನ್ ಅಲ್ ಮನ್ಸೂರಿ ಹೇಳಿದ್ದಾರೆ. ಇದರ ಭಾಗವಾಗಿ ವಿಶ್ವದ ಮೊದಲನೇಯ ತೇಲುವ ಮಸೀದಿ ಕಾಮಗಾರಿ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ತೇಲುವ ಮಸೀದಿಯನ್ನು ದುಬೈ ವಾಟರ್ ಕಾಲುವೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ, ಇದು ನೀರಿನೊಳಗಿನ ಪ್ರಾರ್ಥನಾ ಸಭಾಂಗಣವನ್ನು ಒಳಗೊಂಡಿದೆ. ಮಸೀದಿಯು ಮೂರು ಮಹಡಿಗಳಲ್ಲಿರಲಿದೆ. ಪ್ರಾರ್ಥನಾ ಮಂದಿರವು ನೀರಿನಲ್ಲಿ ಇರಲಿದೆ ಎಂದ ಅವರು ಬಹು-ಬಳಕೆಯ ಸಭಾಂಗಣ ಮತ್ತು ಇಸ್ಲಾಮಿಕ್ ಪ್ರದರ್ಶನ ಕೇಂದ್ರವನ್ನು ಒಳಗೊಂಡಿರುವ ಆಕರ್ಷಣೆಯ ಚಿತ್ರಗಳನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.

ಮುಸ್ಲಿಮರು, ಮುಸ್ಲಿಮೇತರರು, ಸ್ಥಳೀಯ ನಿವಾಸಿಗಳು, ಸಂದರ್ಶಕರು ಮತ್ತು ಪ್ರವಾಸಿಗರಿಗೆ ಅಂತರರಾಷ್ಟ್ರೀಯ ಧಾರ್ಮಿಕ ಪ್ರವಾಸೋದ್ಯಮದ ಆಕರ್ಷಣೆಯಾಗಿ ಎಮಿರೇಟ್ ನ ಸ್ಥಾನಮಾನ ಬಲಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಮದ್ ಬಿನ್ ಶೇಖ್ ಅಹ್ಮದ್ ಅಲ್ ಶೈಬಾನಿ, ಮಸೀದಿ ವ್ಯವಹಾರಗಳ ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಮುಹಮ್ಮದ್ ಅಲಿ ಬಿನ್ ಜಾಯೆದ್ ಅಲ್ ಫಲಾಸಿ, ನಿರ್ದೇಶಕ ಒಮರ್ ಮುಹಮ್ಮದ್ ಅಲ್ ಖತೀಬ್, ಕಾರ್ಯನಿರ್ವಾಹಕ ನಿರ್ದೇಶಕ ಅಹ್ಮದ್ ಖಲ್ಫಾನ್ ಅಲ್ ಮನ್ಸೂರಿ, ಸಾಂಸ್ಕೃತಿಕ ಸಂವಹನ ಸಲಹೆಗಾರ ಮುಹಮ್ಮದ್ ಮುಸಾಬಿಹ್ ದಹಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here