ಮಂಗಳೂರು(ಬೆಂಗಳೂರು): ಪ್ರಭುಧ್ಯಾ (21) ಎಂಬ ಯುವತಿಯ ಮೃತದೇಹ ನಿನ್ನೆ ಸಂಜೆ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯ ಬಾತ್ ರೂಂನಲ್ಲಿ ಪತ್ತೆಯಾಗಿದೆ.
ಪದವಿ ಓದುತ್ತಿದ್ದ ಪ್ರಭುಧ್ಯಾ ಶವವಾಗಿ ಪತ್ತೆಯಾಗಿದ್ದು, ಕುತ್ತಿಗೆ ಮತ್ತು ಕೈಗಳನ್ನು ಕತ್ತರಿಸಲಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡರೂ ನನ್ನ ಮಗಳ ಕೊಲೆಯಾಗಿದೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ. ಯಾರೋ ಕಿಡಿಗೇಡಿಗಳು ನನ್ನ ಮಗಳು ಪ್ರಭುದ್ಯಾಳನ್ನು ಹತ್ಯೆ ಮಾಡಿದ್ದಾರೆ ಎಂದು ಮೃತ ಪ್ರಭುದ್ಯಾ ತಾಯಿ ಸೌಮ್ಯ ಹೇಳಿದ್ದಾರೆ. ಮಗಳು ಧೈರ್ಯವಂತೆ, ಯಾವುದೇ ಸಮಸ್ಯೆ ಇರಲಿಲ್ಲ. ಪಾನಿಪುರಿ ತಿನ್ನುವುದಕ್ಕೆ ಹೋಗುತ್ತೇನೆ ಎಂದು ಫೋನ್ ಮಾಡಿದ್ದಳು. ಕಾಲೇಜಿಗೆ ಹೋದಾಗಲೂ ಫೋನ್ ಮಾಡುತ್ತಿದ್ದಳು. ನಾನು ಕೆಲಸಕ್ಕೆ ಹೋಗಿದ್ದೆ, ಮಗ ಜಿಮ್ ಗೆ ಹೋಗಿದ್ದ. ಮನೆಯಲ್ಲಿ ಮಗಳು ಪ್ರಭುದ್ಯಾ ಒಬ್ಬಳೇ ಇದ್ದಳು ಎಂದು ತಾಯಿ ಸೌಮ್ಯ ವಿವರಿಸಿದ್ದಾರೆ. ಮನೆಯ ಹಿಂದಿನ ಬಾಗಿಲು ಓಪನ್ ಆಗಿದೆ. ಮನೆಯಲ್ಲಿ ಇದ್ದ ಮಗಳ ಫೋನ್ ನಾಪತ್ತೆಯಾಗಿದೆ. ಯಾರೋ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.