ಟರ್ಕಿ ಭೂಕಂಪ- ಇಬ್ಬಾಗವಾದ ರನ್‌ ವೇ

ಇಸ್ತಾಂಬುಲ್: ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಮೂರು ಪ್ರಬಲ ಭೂಕಂಪ ಸಂಭವಿಸಿದ್ದು, ಇದರಿಂದ ಭಾರಿ ಪ್ರಮಾಣದ ಮೂಲಸೌಕರ್ಯ ಹಾಗೂ ಜೀವ ಹಾನಿ ಸಂಭವಿಸಿದೆ. ಈ ಭೂಕಂಪಗಳಲ್ಲಿ ಈವರೆಗೆ ಸುಮಾರು ಸಾವಿರಾರು ಮಂದಿ ಸಾವಿಗೀಡಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟ ಆಗಿದೆ. ಈ ನಡುವೆ ಟರ್ಕಿಯ ಹಾತೇ ಪ್ರಾಂತ್ಯದಲ್ಲಿನ ವಿಮಾನ ನಿಲ್ದಾಣದಲ್ಲಿನ ಏಕೈಕ ರನ್‌ವೇ ಕೂಡಾ ಇಬ್ಭಾಗವಾಗಿದ್ದು, ಉಪಯೋಗಿಸಲಸಾಧ್ಯವಾದ ಸ್ಥಿತಿಗೆ ತಲುಪಿದೆ. ಸಂಪೂರ್ಣವಾಗಿ ಹಾಳಾಗಿರುವ ರನ್‌ವೇ ವಿಡಿಯೊ ಸಾಮಾಜಿಕ ಜಾಲಕತಾಣದಲ್ಲಿ ವೈರಲ್ ಆಗಿದ್ದು, ವಿಡಿಯೊದಲ್ಲಿ ರನ್‌ವೇ ಇಬ್ಭಾಗವಾಗಿ, ಯಾವುದೇ ವಿಮಾನ ಹಾರಾಟಕ್ಕೂ ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವುದು ದಾಖಲಾಗಿದೆ.

ಇನ್ನೊಂದೆಡೆ ಖ್ಯಾತ ಫುಟ್‌ಬಾಲ್‌ ಆಟಗಾರ ಕ್ರಿಶ್ಚಿಯನ್‌ ಆಟ್ಸು ಭೂಕಂಪದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಟರ್ಕೀಶ್‌ ಕ್ಲಬ್‌ ಹಯಾಟ್ಸ್‌ ಫೋರ್‌ ಉಪಾಧ್ಯಕ್ಷ ತಿಳಿಸಿದ್ದಾರೆ.

update: ಘಾನಾದ ರಾಷ್ಟ್ರೀಯ ಆಟಗಾರ ಮತ್ತು ಮಾಜಿ ನ್ಯೂಕ್ಯಾಸಲ್‌ ಮಿಡ್‌ ಫೀಲ್ಡರ್‌ ಕ್ರಿಶ್ಚನ್‌ ಅಟ್ಸು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಟರ್ಕಿಯಲ್ಲಿ ಘಾನಾದ ರಾಯಭಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here