ಪ್ಯಾಕ್ಟ್‌ ಚೆಕ್‌ – ಇದು ನಕಲಿ…..

ಮಂಗಳೂರು: ಮುಂಬರುವ 2023ರ ಕರ್ನಾಟಕ ವಿಧಾನಸಭೆಯ ಚುನಾವಣಾ ವೇಳಾ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ವೇಳಾ ಪಟ್ಟಿಯೊಂದನ್ನು ಹಂಚಿಕೊಳ್ಳಲಾಗಿದೆ. ಇದರ ಪ್ರಕಾರ ಮಾರ್ಚ್ 27ರಿಂದ ನೀತಿ ಸಂಹಿತಿ ಜಾರಿಗೆ ಬರಲಿದ್ದು , ಏಪ್ರಿಲ್ 17, ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುತ್ತದೆ, ಏಪ್ರಿಲ್ 26, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು,  ಏಪ್ರಿಲ್ 27 ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ, ಮೇ12 ಕ್ಕೆ ಮತದಾನ ನಡೆದು, ಮೇ 15ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂಬೆಲ್ಲಾ ಅಂಶಗಳನ್ನು ದಿನಾಂಕ ಸಹಿತ ಪೋಸ್ಟ್‌ರ್‌ನಲ್ಲಿ ಸೇರಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಪೋಸ್ಟರ್‌ ನಕಲಿಯಾಗಿದ್ದು 2018ರ ಚುನಾವಣೆಗೆ ಸಂಬಂಧಿಸಿದ್ದಾಗಿದೆ. ಇಸವಿ ಬದಲಾವಣೆ ಮಾಡಿ ಕಿಡಿಗೇಡಿಗಳು ಇದನ್ನು ಹರಿಯ ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here