ಕೋವಿಶೀಲ್ಡ್ ಅಡ್ಡಪರಿಣಾಮ ಬಗ್ಗೆ ಸರಕಾರಕ್ಕೆ ಮೊದಲೇ ತಿಳಿಸಲಾಗಿತ್ತು – ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ

ಮಂಗಳೂರು(ಹೊಸದಿಲ್ಲಿ): ಕೋವಿಡ್ -19 ಪ್ರತಿರೋಧಕ ಕೋವಿಶೀಲ್ಡ್ ಲಸಿಕೆಯಿಂದ ಆಗುವ ಅತಿ ವಿರಳ ಅಡ್ಡಪರಿಣಾಮಗಳನ್ನು ಮುಂಚೆಯೇ ಬಯಲು ಮಾಡಿದ್ದೇವೆ ಎಂದು ಕೋವಿಶೀಲ್ಡ್ ಲಸಿಕೆ ಉತ್ಪಾದಿಸಿದ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐಐ) ಹೇಳಿದೆ. ಈ ಮೂಲಕ ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮಗಳ ಕುರಿತು ಎದ್ದಿರುವ ವಿವಾದದ ಕುರಿತು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

“ಕೋವಿಶೀಲ್ಡ್ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಪ್ಲೇಟ್‌ಲೆಟ್‌ಗಳ ಸಂಖ್ಯೆ ಇಳಿಮುಖವಾಗುವ ‘ಹೂಂಬೊಸಿಸ್ విತ್ ಹೂಂಬೊಸೈಟೋಪೇನಿಯಾ ಸಿಂಡೋಮ್’ (ಟಿಟಿಆರ್) ಸೇರಿದಂತೆ ಕೆಲವು ಅತಿ ವಿರಳ ಅಡ್ಡಪರಿಣಾಮಗಳ ಬಗ್ಗೆ 2021ರಲ್ಲೇ ಸರಕಾರಕ್ಕೆ ಮಾಹಿತಿ ನೀಡಲಾಗಿತ್ತು. ಅಲ್ಲದೇ ಲಸಿಕೆಯ ಪ್ಯಾಕೇಜಿಂಗ್ ಮೇಲೆ ಈ ವಿಚಾರವನ್ನು ನಮೂದಿಸಲಾಗಿತ್ತು,” ಎಂದು ಎಸ್‌ಐಐ ಹೇಳಿದೆ. ಅಲ್ಲದೇ ಆಗಲೇ ಕೋವಿಶೀಲ್ಡ್‌ನ ಹೆಚ್ಚುವರಿ ಡೋಸ್‌ ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಯಿತು ಎಂದೂ ಕಂಪನಿ ಸ್ಪಷ್ಟಪಡಿಸಿದೆ.

ನಾನಾ ದೇಶಗಳಿಂದ ಲಸಿಕೆಯನ್ನು ಹಿಂಪಡೆಯುವುದಾಗಿ ಔಷಧ ತಯಾರಿಕಾ ಕಂಪನಿ ಆಸ್ಟ್ರಾಜೆನಿಕಾ ಘೋಷಿಸಿದ ಬೆನ್ನಲ್ಲೇ ಎಸ್ ಐಐನಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ಟಿಟಿಎಸ್ ಅಡ್ಡಪರಿಣಾಮಗಳ ಕುರಿತು ಆಸ್ಟ್ರಾಜೆನಿಕಾ ಕಂಪನಿ ಇತ್ತೀಚೆಗೆ ತಪ್ರೊಪ್ಪಿಕೊಂಡಿತ್ತು. ಬ್ರಿಟನ್‌ನ ಕೋರ್ಟ್‌ನಲ್ಲಿ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯ ಸಹಯೋಗ ದಲ್ಲಿ ಆಸ್ಟ್ರಾಜೆನಿಕಾ ಕಂಪನಿಯು ‘ಕೋವಿಶೀಲ್ಡ್’ ಲಸಿಕೆ ಅಭಿವೃದ್ಧಿಪಡಿಸಿತ್ತು. ಭಾರತದಲ್ಲಿ ಈ ಲಸಿಕೆಯನ್ನು ಎಸ್ಐಐ ಉತ್ಪಾದಿಸಿ ದೇಶ-ವಿದೇಶಗಳಿಗೆ ಸರಬರಾಜು ಮಾಡಿತ್ತು. ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಲಸಿಕೆಯು ಮಹತ್ವದ ಪಾತ್ರ ವಹಿಸಿತ್ತು. ಕೊರೊನಾ ನಿಯಂತ್ರಿಸುವಲ್ಲಿ ‘ಕೋವಿಶೀಲ್ಡ್’ ಅಲ್ಲದೇ ಭಾರತದಲ್ಲಿ ‘ಭಾರತ್ ಬಯೋಟೆಕ್’ ಅಭಿವೃದ್ಧಿಪಡಿಸಿದ ‘ಕೊವ್ಯಾಕ್ಸಿನ್’ ಲಸಿಕೆಯನ್ನೂ ಭಾರಿ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here