ಅಡುಗೆ ಅನಿಲ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ

ಮಂಗಳೂರು: ಕೇಂದ್ರ ಸರಕಾರವು ಅಡುಗೆ ಅನಿಲ ದರವನ್ನು ಏರಿಕೆ ಮಾಡಿರುವ ಕ್ರಮ ಖಂಡಿಸಿ ದ ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಂಪನಕಟ್ಟೆಯಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ಕಾರ್ಯಕರ್ತೆಯರು ಸ್ಟವ್ ಕಟ್ಟಿಗೆ ಬಳಸಿ ಚಪಾತಿ ತಯಾರಿಸಿ, ಬಿ ಜೆ ಪಿ ಸರಕಾರಕ್ಕೆ ದಿಕ್ಕಾರ ಕೂಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಬೊಮ್ಮಾಯಿಗೆ ಚಪಾತಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ಕಟ್ಟಿಗೆ ಕಳುಹಿಸಿ ಕೊಡುವ ಕಾಲ ಬಂದಿದೆ ಎಂದು ಅಣಕವಾಡಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ಜಿಲ್ಲಾ ನಾಯಕರು, ನಾಯಕಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here