ಎನ್‌ಐಎ ದಾಳಿ- ಪುತ್ತೂರಿನ ಓರ್ವ ಮತ್ತು ನಂದಾವರದ ನಾಲ್ವರ ಬಂಧನ

ಮಂಗಳೂರು: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇಳೆ ಗಲಭೆ ಸೃಷ್ಟಿಸಲು ಹಣಕಾಸಿನ ನೆರವು ಒದಗಿಸಿದ ಆರೋಪದ ಹಿನ್ನಲೆಯಲ್ಲಿ ಬಂಟ್ವಾಳದಲ್ಲಿ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳ ಎನ್‌ಐಎ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಬಂಟ್ವಾಳದ ನಂದಾವರ ನಿವಾಸಿಗಳಾದ ಮಹಮ್ಮದ್‌ ಸಿನಾನ್‌, ಇಕ್ಬಾಲ್‌ , ಸರ್ಪಾಝ್ ನವಾಝ್‌, ನೌಫಲ್‌, ಮತ್ತು ಪುತ್ತೂರು ತಾಲೂಕಿನ ಗ್ರಾಂಮಾಂತರ ಠಾಣಾ ವ್ಯಾಪ್ತಿಯ ಇರ್ದೆ ಮಣ್ಣಾಪು ನಿವಾಸಿ ರಫೀಕ್‌ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಹಲವು ತಿಂಗಳಿನಿಂದ  ಇವರ ವ್ಯವಹಾರದ ಮೇಲೆ ಎನ್‌ಐಎ ನಿಗಾ ವಹಿಸಿತ್ತು. ಹಲವು ಬ್ಯಾಂಕ್‌ ಖಾತೆಗಳಿಗೆ ನಿರಂತರವಾಗಿ ಹಣ ರವಾನೆ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಐವರನ್ನು ವಶಕ್ಕೆ ಪಡೆದು  ವಿಚಾರಣೆ ನಡೆಸಲಾಗುತ್ತಿದೆ.

ಪಾಣೆ ಮಂಗಳೂರು ಹಾಗೂ ಮೆಲ್ಕಾರಿನ ಎರಡು ಆನ್‌ ಲೈನ್‌ ಸೇವೆ ನೀಡುವ ಸೈಬರ್‌ ಸೆಂಟರ್‌ ಗಳಿಗೆ ಮಾ.5ರಂದು ಮದ್ಯಾಹ್ನ ಕೆಲವು ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದರು. ಎಲ್ಲಾ ದಾಳಿ ವೇಳೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್‌ ನಡೆಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here