ಮಂಗಳೂರು: ಮಂಗಳೂರು ಮತ್ತು ಕೊಯಂಬತ್ತೂರು ಸ್ಪೋಟದಲ್ಲಿ ಐಎಸ್ ಕೆ ಸದಸ್ಯರು ಭಾಗಿಯಾಗಿದ್ದು, ದಕ್ಷಿಣ ಭಾರತದಲ್ಲಿ ನಮ್ಮ ಸದಸ್ಯರು ನೆಲೆಸಿದ್ದಾರೆ ಎಂಬ ಸ್ಪೋಟಕ ವಿಷಯವನ್ನು ಐಎಸ್ ಕೆ ಒಪ್ಪಿಕೊಂಡಿದೆ.
ಖೊರಾಸನ್ ಇಸ್ಲಾಮಿಕ್ ಸ್ಟೇಟ್ ಎಂಬ ಉಗ್ರ ಸಂಘಟನೆ ತನ್ನ ವಾಯ್ಸ್ ಆಫ್ ಖೊರಾಸನ್ ನಿಯತಕಾಲಿಕೆಯಲ್ಲಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಅ. 23ರಂದು ಕೊಯಂಬತ್ತೂರಿನಲ್ಲಿ ನಡೆದ ಕಾರು ಸ್ಪೋಟ ಮತ್ತು ನ.19ರಂದು ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟವನ್ನು ಐಎಸ್ ಕೆ ಸಂಯೋಜಿತ ಉಗ್ರರು ನಡೆಸಿದ್ದರು ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಅಲ್ ಅಜೈಮ್ ಮೀಡಿಯಾ ಪೌಂಡೇಷನ್ ನ ಇಂಗ್ಲೀಷ್ ನಲ್ಲಿರುವ 68 ಪುಟಗಳ ವಾಯ್ಸ್ ಆಫ್ ಖೊರಾಸನ್ ಪ್ರಚಾರದ ನಿಯತಕಾಲಿಕವನ್ನು ಬಿಡುಗಡೆ ಮಾಡಿದೆ.