ʼಪ್ರಾಜೆಕ್ಟ್‌ ಕೆʼ ಚಿತ್ರೀಕರಣದ ವೇಳೆ ಅಮಿತಾಬ್ ಗೆ ಗಂಭೀರ ಗಾಯ

ಮುಂಬೈ: ಹೈದರಾಬಾದ್‌ನಲ್ಲಿ ʼಪ್ರಾಜೆಕ್ಟ್‌ ಕೆʼ ಚಿತ್ರೀಕರಣದ ವೇಳೆ ಅಮಿತಾಬ್ ಬಚ್ಚನ್ (80) ಅವರಿಗೆ ಗಂಭೀರವಾಗಿ ಗಾಯವಾಗಿದ್ದು ಬಾಲಿವುಡ್ ಸ್ಟಾರ್ ಅಮಿತಾಬ್  ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಗಾಯದ ಬಗ್ಗೆ ಬರೆದುಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದು ಈಗ ತಾನು ಮುಂಬೈನ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಓಡಾಡುವಾಗ ಹಾಗೂ  ಉಸಿರಾಟದ ವೇಳೆ  ನೋವು ಕಾಣಿಸಿಕೊಳ್ಳುತ್ತಿದೆ  ಎಂದು ಅಮಿತಾಬ್ ಬಚ್ಚನ್  ಬ್ಲಾಗ್ ಪೋಸ್ಟ್‌ನಲ್ಲಿ ಬರೆದು ಕೊಂಡಿದ್ದು, ಚೇತರಿಸಿಕೊಳ್ಳಲು ಕೆಲವು ವಾರಗಳು ಬೇಕಾಗಬಹುದು ಎನ್ನಲಾಗಿದೆ.

LEAVE A REPLY

Please enter your comment!
Please enter your name here