ಕೊಲೆಯಲ್ಲಿ ಅಂತ್ಯವಾದ ಅಡುಗೆ ಮತ್ತು ಪಾತ್ರೆ ತೊಳೆಯುವ ವಿಚಾರ

ಮಂಗಳೂರು: ಅಡುಗೆ ಮತ್ತು ಪಾತ್ರೆ ತೊಳೆಯುವ ವಿಚಾರದಲ್ಲಿ ಇಬ್ಬರ ನಡುವಿನ ಜಗಳ ಓರ್ವ ಕೂಲಿ ಕಾರ್ಮಿಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರು ಗ್ರಾಮದ ಇಂಡಿಯನ್ ಕೋಸ್ಟ್ ಗಾರ್ಡ್ ಸೈಟ್ ನಲ್ಲಿ ನಡದಿದೆ.

ಮೃತರನ್ನು ಕೂಲಿ ಕಾರ್ಮಿಕ, ಉತ್ತರ ಪ್ರದೇಶದ ಸಂಜಯ್(28) ಎಂದು ಗುರುತಿಸಲಾಗಿದೆ. ಇದೇ ರಾಜ್ಯದ ಸೋಹಾನ್ ಯಾದವ್ (19) ಕೊಲೆ ಆರೋಪಿಯಾಗಿದ್ದಾನೆ. ಇವರಿಬ್ಬರು ಇಂಡಿಯನ್ ಕೋಸ್ಟ್ ಗಾರ್ಡ್ ಸೈಟ್ ನಲ್ಲಿ ಆವರಣ ಗೋಡೆ ನಿರ್ಮಾಣ ಕಾಮಗಾರಿ ಕಾರ್ಮಿಕರಾಗಿದ್ದಾರೆ.

ಮಾ.5ರಂದು ರಾತ್ರಿ ಸಂಜಯ್ ಮತ್ತು ಸೋಹಾನ್ ನಡುವೆ ಅಡುಗೆ ಮತ್ತು ತಟ್ಟೆ, ಪಾತ್ರೆ ತೊಳೆಯುವ ವಿಚಾರದಲ್ಲಿ  ವಾಗ್ವಾದ ನಡೆದಿದೆ. ಈ ವೇಳೆ ಸಂಜಯ್ ನನ್ನು ಸೋಹನ್ ಯಾದವ್ ಬಲವಾಗಿ ಹಿಂದಕ್ಕೆ ತಳ್ಳಿದ್ದಾನೆ. ಈ ವೇಳೆ ಕೆಳಗೆ ಬಿದ್ದ ಸಂಜಯ್ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮಾ.6ರಂದು ಮುಂಜಾನೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಸೋಹನ್‌ನನ್ನು ಬಜ್ಪೆ ಪೊಲೀಸರು ಮಂಗಳೂರು ರೈಲು ನಿಲ್ದಾಣದ ಬಳಿ ಮಾ.7 ರಂದು ಮಧ್ಯಾಹ್ನ ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here