ಬೆಳಗಾವಿಯಲ್ಲಿ ಪತ್ತೆಯಾದ ನಿಗೂಢ ಬಲೂನ್‌

ಬೆಳಗಾವಿ: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗದ್ದಿಕರವಿನ ಕೊಪ್ಪ ಗ್ರಾಮದ ಹೊಲವೊಂದರಲ್ಲಿ ವಿಚಿತ್ರವಾದ ಬಲೂನ್ ಪತ್ತೆಯಾಗಿದ್ದು, ಕುತೂಹಲದೊಂದಿಗೆ ಆತಂಕ ಸೃಷ್ಟಿಸಿದೆ.

ಬಲೂನ್ ಒಳಗಡೆ ಎಲೆಕ್ಟ್ರಾನಿಕ್ ಡಿವೈಸ್ ಬ್ಯಾಟರಿ ಇದ್ದು, ಆತಂಕಕ್ಕೆ ಕಾರಣವಾಗಿದೆ. ಅಮೇರಿಕಾದ ಆಗಸದಲ್ಲಿ ತಿಂಗಳ ಹಿಂದೆ ಚೀನಾ ಹಾರಿಬಿಟ್ಟಿದ್ದ ಬಲೂನ್ ನಂತೆ ಕಾಣುತ್ತಿರುವ ಈ ನಿಗೂಢ ಬಲೂನ್ ಏನಾಗಿರಬಹುದೆಂಬ ಕುತೂಹಲ ಗ್ರಾಮಸ್ಥರಲ್ಲಿ ಮೂಡಿದೆ. ಬಲೂನ್‌ ಬಗ್ಗೆ ಸ್ಥಳಿಯರು ಪೋಲಿಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪೋಲೀಸರು ಬಲೂನ್ ಹಾಗೂ ‌ಇತರ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಬ್ಯಾಟರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಬೆಳಗಾವಿಗೆ ಕೊಂಡೊಯ್ದಿದ್ದಾರೆ.

LEAVE A REPLY

Please enter your comment!
Please enter your name here