ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಐಟಿ ರೈಡ್ ಆದಾಗ ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪ ಮದುವೆ ಸಿಡಿ ಸಿಕ್ಕಿದೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಹೊಸ ಬಾಂಬ್ ಸಿಡಿಸಿದ್ದಾರೆ. ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮನಾಭ ಪ್ರಸನ್ನ ಈ ಹೇಳಿಕೆ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಮನೆಯಲ್ಲಿ ರೈಡ್ ಆದಾಗ ಸಿಡಿ, ಡೈರಿ ಸಿಕ್ತು. ಡಿ.ಕೆ ಶಿವಕುಮಾರ್ ನ ಕೇಳಿ, ಆ ಡೈರಿ, ಸಿಡಿ ಯಾರು ಕೊಟ್ರು, ಎಲ್ಲಿಂದ ಬಂತು, ಯಾರು ಅದನ್ನ ಕೊಟ್ರು , ಅದರಲ್ಲಿ ಏನಿತ್ತು ಅಂತಾ ಎಂದು ಪ್ರಶ್ನೆಗಳ ಸುರಿಮಳೆಗೈದ ಪ್ರಸನ್ನ ಯಡಿಯೂರಪ್ಪ ಜೈಲಿಂದ ಆಚೆ ಹೋಗೋಕೆ ಎಷ್ಟು ಕೋಟಿ ಕೊಟ್ರು ಅಂತಾ ಕೇಳಿ. ಈಗಲೂ ನನ್ನ ಹತ್ರ ಅದರ ಇನ್ನೊಂದು ಕಾಪಿ ಇದೆ, ಬೇಕಿದ್ರೆ ಕೊಡ್ತೀನಿ. ಮುಂದಿನ ದಿನಗಳಲ್ಲಿ ದಾಖಲೆ ಇಟ್ಟುಕೊಂಡು ಎಲ್ಲಾ ಹೇಳ್ತೀನಿ. ಡಿ.ಕೆ. ಶಿವಕುಮಾರ್ ಗೆ ಆ ಸಿಡಿ, ಡೈರಿ ಕೊಟ್ಟಿದ್ದು ನಾನೇ ಎಂದು ಪದ್ಮನಾಭ ಪ್ರಸನ್ನ ಹೇಳಿದ್ದಾರೆ.
ಜೈಲಿಂದ ಬಿಡುಗಡೆ ಆಗೋದಕ್ಕೆ ಜಡ್ಜ್ ಗೆ ಎಷ್ಟು ದುಡ್ಡು ಕೊಟ್ಟಿದೀನಿ ಅಂತಾ ಯಡಿಯೂರಪ್ಪ ಆ ಡೈರಿಲಿ ಬರೆದಿದ್ದಾರೆ. ಪಿಂಟೋ ಅನ್ನೋ ನ್ಯಾಯಾಧೀಶರಿಗೆ ದುಡ್ಡು ಕೊಟ್ಟಿದ್ದೀನಿ ಅಂತಾ ಬರೆದಿದ್ದಾರೆ. ಆ ಡೈರಿನಾ ನಾಳೆಯೇ ಕೊಡ್ತೀನಿ. ಗಾಳಿಯಲ್ಲಿ ಗುಂಡು ಹೊಡೆಯಲ್ಲಾ, ನೇರವಾಗೇ ಹೇಳ್ತೀನಿ ಎಂದು ಕೆಜೆಪಿ ಪಕ್ಷಾಧ್ಯಕ್ಷ ಪದ್ಮನಾಭ ಪ್ರಸನ್ನ ತಿಳಿಸಿದ್ದಾರೆ.