ಹನಿಟ್ರಾಪ್‌ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗ್‌ ಅಂದರ್

ಬೆಂಗಳೂರು: ಸುರಸುಂದರಾಂಗಿಯರನ್ನು ಮುಂದಿಟ್ಟುಕೊಂಡು ಅಮಾಯಕ ಪುರುಷರನ್ನು ಹನಿಟ್ರಾಪ್‌ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗೊಂದನ್ನು ಬೆಂಗಳೂರಿನ ಬೇಗೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮೋಹಕ ಸುಂದರಿಯರ ಅರೆನಗ್ನ

ಫೋಟೋಗಳನ್ನು ಬಡೋ ಆಂಡ್‌ ಟ್ಯಾಗ್ಡ್‌ ವೆಬ್‌ ಸೈಟ್‌ ಮೂಲಕ ಕಳುಹಿಸಿ ಅಮಾಯಕರನ್ನು ಕರೆಸಿ ಸುಲಿಗೆ ಮಾಡುತ್ತಿದ್ದ ಅನಿಲ್‌ ಕುಮಾರ್‌, ಶಿವಶಂಕರ್‌, ಗಿರೀಶ್‌, ರಾಮಮೂರ್ತಿ, ಎಂಬವರನ್ನು ಬಂಧಿಸಲಾಗಿದೆ. ರೂಮಿಗೆ ಬರುತ್ತಿದ್ದ ಗ್ರಾಹಕರನ್ನು ನಗ್ನ ಗೊಳಿಸಿ ವೀಡಿಯೋ ಮಾಡಿ ಆ ಬಳಿಕ ಅದೇ ವಿಡಿಯೋವನ್ನು ಮುಂದಿಟ್ಟು ಹಣಕ್ಕೆ ಈ ಗ್ಯಾಂಗ್‌ ಡಿಮ್ಯಾಂಡ್‌ ಮಾಡುತ್ತಿತ್ತು. ಬೇಗೂರು ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬರನ್ನು ಟ್ರಾಪ್‌ ಮಾಡಿದ ಈ ನಟೋರಿಯಸ್‌ ಗ್ಯಾಂಗ್‌ 10 ಲಕ್ಷ ರೂಪಾಯಿಗೆ ಡಿಮ್ಯಾಂಡ್‌ ಮಾಡಿತ್ತು. ದಿಕ್ಕು ತೋಚದ ಆ ವ್ಯಕ್ತಿ ಬೇಗೂರು ಪೊಲೀಸರ ಮೊರೆ ಹೋಗಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು  ಮೂರು ಲಕ್ಷ ರೂಪಾಯಿಗೆ ಆ ವ್ಯಕ್ತಿ ಮೂಲಕ ವ್ಯವಹಾರ ಕುದುರಿಸಿ ಹಣ ಪಡೆಯಲು ಬಂದ ಗ್ಯಾಂಗ್‌ ನ ಸದಸ್ಯನನ್ನು ಬಂಧಿಸಿ ಆತನಿಂದ ಮಾಹಿತಿ ಪಡೆದು ಗ್ಯಾಂಗ್‌ ನ ಇತರ ಸದಸ್ಯರನ್ನು ವಶಕ್ಕೆ ಪಡೆದಿದ್ಧಾರೆ.

LEAVE A REPLY

Please enter your comment!
Please enter your name here