ಕಾಸರಗೋಡು: ಕಸಾಯಿಖಾನೆಗೆ ಸಾಗಿಸುತ್ತಿದ್ದ ಕೋಣವೊಂದು ಕೊಂಬಿನಿಂದ ತಿವಿದ ಪರಿಣಾಮ ಯುವಕನೊಬ್ಬ ಮೃತಪಟ್ಟು ಕೆಲವರು ಗಾಯಗೊಂಡ ಘಟನೆ ಕಾಸರಗೋಡಿನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಚಿತ್ರದುರ್ಗದ ಸಿದ್ದೀಕ್ (22) ಎಂದು ಗುರುತಿಸಲಾಗಿದೆ. ಕಸಾಯಿಖಾನೆಗೆ ತರಲಾಗಿದ್ದ ಕೋಣವನ್ನು ವಾಹನದಿಂದ ಇಳಿಸುವಾಗ ಹಗ್ಗ ತುಂಡಾಗಿದ್ದು, ಕೋಣ ತಪ್ಪಿಸಿ ಕೊಂಡಿದೆ. ಓಡುತ್ತಿದ್ದ ಕೋಣವನ್ನು ಹಿಡಿಯಲು ಪ್ರಯತ್ನಿಸಿದ ಸಿದ್ದೀಕ್ ಗೆ ಕೊಂಬಿನಿಂದ ತಿವಿದಿದೆ. ಹೊಟ್ಟೆಗೆ ತೀವ್ರತರದ ಗಾಯವಾಗಿದ್ದ ಸಿದ್ದೀಕ್ ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ತಡರಾತ್ರಿ ಆತ ಮೃತ ಪಟ್ಟಿದ್ದಾನೆ. ತಪ್ಪಿಸಿಕೊಂಡ ಕೋಣ ಕಿ.ಮೀ.ಗಳಷ್ಟು ದೂರ ಓಡಿ ದಾಂಧಲೆ ನಡೆಸಿದ್ದು ಮೊಗ್ರಾಲ್ ನ ಎರಡು ಅಂಗಡಿ, ಮತ್ತು ವಾಹನಗಳಿಗೆ ಹಾನಿ ಮಾಡಿದೆ. ಮಹಿಷನ ದಾಂಧಲೆಗೆ ಭಯಪಟ್ಟು ಓಡಿ ತಪ್ಪಿಸಲೆತ್ನಿಸಿದ ಸುಮಾರು 20ರಿಂದ 25 ಮಂದಿಯನ್ನು ಗಾಯಗೊಂಡಿದ್ದಾರೆ. ಕೆಲವು ಗಂಟೆಗಳ ಕಾಲ ಪರಿಸರದಲ್ಲಿ ಭಯ ಸೃಷ್ಟಿಸಿದ ಕೋಣವನ್ನುಕೊನೆಗೂ ಪೊಲೀಸರು ಮತ್ತು ಅಗ್ನಿಶಾಮಕದಳದವರು ಸಾರ್ವಜನಿಕರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.