



ಶಿವಮೊಗ್ಗ: ಎನ್ ಐ ಎ ವಿಚಾರಣೆ ನಡೆಸುತ್ತಿರುವ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ನ ಒಂದೊಂದೇ ವಿಚಾರಗಳು ಈಗ ಬೆಳಕಿಗೆ ಬರತೊಡಗಿದೆ. ಶಾರೀಕ್ ಮತ್ತವನ ಗ್ಯಾಂಗ್ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಇಟ್ಟು ತಾನು ತಯಾರಿಸಿದ ಬಾಂಬ್ ಗಳನ್ನು ಟೆಸ್ಟ್ ಮಾಡುತ್ತಿದ್ದ ಎನ್ನುವುದು ಈಗ ಬೆಳಕಿಗೆ ಬಂದಿದೆ.







ಆತ ಟ್ರಯಲ್ ಬ್ಲಾಸ್ಟ್ ಗೆ ಮಾರ್ಗದ ಬದಿ ನಿಲ್ಲಿಸಿದ್ದ ವಾಹನಗಳನ್ನು ಪ್ರಮುಖವಾಗಿ ಟಾರ್ಗೆಟ್ ಮಾಡುತ್ತಿದ್ದು ಶಿವಮೊಗ್ಗದ ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೂ ಮೊದಲು ತೀರ್ಥಹಳ್ಳಿಯಲ್ಲಿ ತಾಲೀಮು ನಡೆಸಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ.














