ಲಾಸ್ ಏಂಜಲೀಸ್: ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಲವಾರು ಜನಪ್ರಿಯ ಜಾಗತಿಕ ತಾರೆಯರ ಉಪಸ್ಥಿತಿಗೆ ಸಾಕ್ಷಿಯಾಗಲಿದೆ. ಪ್ರತಿ ವರ್ಷ ನಡೆಯುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಮೆಚ್ಚಿನ ಉಡುಗೆ-ತೊಡುಗೆಯೊಂದಿಗೆ ಹಾಜರಾಗುವ ತಾರೆಯರಿಗೆ ನೀಡುವ ಕೆಂಪು ಹಾಸಿನ ಸ್ವಾಗತವೇ ಪ್ರಮುಖ ಆಕರ್ಷಣೆಯಾಗಿರುತ್ತದೆ. ಆದರೆ,1961 ರ ನಂತರ,ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಇತಿಹಾಸದಲ್ಲೇ ಮೊದಲ ಬಾರಿ ಯಾರಿಗೂ ಕೆಂಪು ಹಾಸಿನ ಸ್ವಾಗತ ನೀಡಲಾಗುತ್ತಿಲ್ಲ. ಅದರ ಬದಲು ತಾರೆಯರಿಗೆ ಈ ಬಾರಿಯ ಸಮಾರಂಭದಲ್ಲಿ ಕೆಂಪು ಹಾಸಿನ ಸ್ವಾಗತದ ಬದಲು ಶಾಂಪೇನ್ ಬಣ್ಣದ ಹಾಸಿನ ಸ್ವಾಗತ ನೀಡಲಾಗುತ್ತದೆ.
ಮಾ.12ರ ರಾತ್ರಿ 8 ಘಂಟೆಗೆ ಲಾಸ್ ಏಂಜಲೀಸ್ ನಲ್ಲಿ ನಡೆಯುವ ಈ ಕಾರ್ಯಕ್ರಮದ ನೇರ ಪ್ರಸಾರ ಭಾರತೀಯ ಕಾಲಮಾನ ಮಾ.13ರ ಬೆಳಿಗ್ಗೆ 5.30ರಿಂದ 6.30ರ ನಡುವೆ ಲಭ್ಯವಾಗಲಿದೆ.