ಪಾನಮತ್ತ ವರ – ಮದುವೆ ರದ್ದುಗೊಳಿಸಿದ ವಧು

ಅಸ್ಸಾಂ : ಇಲ್ಲಿನ ನಲ್ಬರಿ ಜಿಲ್ಲೆಯಲ್ಲಿ ವರನೊಬ್ಬ ತನ್ನ ಮದುವೆಯ ದಿನದಂದೇ ಪಾನಮತ್ತನಾಗಿ ಬಂದಿದ್ದರಿಂದ ವಧು ಮದುವೆಯನ್ನು ರದ್ದುಗೊಳಿಸಿರುವ ಘಟನೆ ನಡೆದಿದೆ. ವರ ಎಷ್ಟು ಕುಡಿದಿದ್ದನೆಂದರೆ ವಿವಾಹದ ವಿಧಿ-ವಿಧಾನಗಳನ್ನು ನಿರ್ವಹಿಸಲು ಆತ ಕಷ್ಟಪಡುತ್ತಿದ್ದ. ವರನ ಕಡೆಯಿಂದ ಬಂದ ಶೇಕಡ 95 ರಷ್ಟು ಜನರು ಪಾನಮತ್ತರಾಗಿದ್ದರು. ಈ ಕುರಿತ ವಿಡಿಯೋ ವೈರಲ್‌ ಆಗಿದ್ದು, ವರ ನೆಲದ ಮೇಲೆ ತೆವಳುವ ದೃಶ್ಯವೂ ಇದರಲ್ಲಿದೆ. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here