ಬುಲೆಟ್‌ ಏರಿ ಬರುವ ಬಿ ಟೆಕ್‌ ಪಾನಿಪೂರಿವಾಲಿ

ನವದೆಹಲಿ: ಈಕೆಯ ಹೆಸರು ತಾಪ್ಸಿ ಉಪಾಧ್ಯಾಯ. ವಯಸ್ಸು 21. ಬಿ ಟೆಕ್‌ ಪದವೀಧರೆ. ಪದವಿ ಪಡೆದ ಬಳಿಕ ಉದ್ಯೋಗ ಸಿಗಲಿಲ್ಲವೆಂದು ಮನೆಯಲ್ಲಿ ಕೂರದೆ ಸ್ವಂತ ಉದ್ಯಮ ಪ್ರಾರಂಭಿಸುವ ಮೂಲಕ ಯಶಸ್ವಿಯಾದ ಯುವತಿ.

ಉದ್ಯೋಗ ಸಿಗದೇ ಇದ್ದಾಗ ಈಕೆ ಮಾಡಿದ ಯೋಚನೆಯೇ ಬೇರೆ. ತನ್ನ ಬುಲೆಟ್‌ ಬೈಕ್‌ ಗೆ ಪಾನಿಪೂರಿ ಗಾಡಿಯನ್ನು ಜೋಡಿಸಿ ಕೊಂಡು ದೆಹಲಿಯ ಜೈಲ್‌ ರೋಡ್‌ ನ ಮೆಟ್ರೋ ಸ್ಟೇಷನ್‌ ಬಳಿ ಪಾನಿಪುರಿ ವ್ಯಾಪಾರ ಪ್ರಾರಂಭಿಸಿದ್ದಾಳೆ. ಈಗ ಈಕೆ ದೆಹಲಿಯ ಬಿ ಟೆಕ್‌ ಪಾನಿಪೂರಿವಾಲಿ ಎಂದೇ ಜನಪ್ರಿಯತೆಗಳಿಸಿದ್ದಾಳೆ ಮಾತ್ರವಲ್ಲ ಉದ್ಯೋಗವಿಲ್ಲದೇ ಕೈ ಕಟ್ಟಿ ಕುಳಿತ ಯುವಕ ಯುವತಿಯರಿಗೆ ಸ್ಪೂರ್ತಿಯಾಗಿದ್ದಾಳೆ.

LEAVE A REPLY

Please enter your comment!
Please enter your name here