



ಬದಿಯಡ್ಕ: ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಆಟೋರಿಕ್ಷಾ ಚಾಲಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ.







ಕುಡ್ಡoಗುಯಿ ಕಡಾರ್ ಪಳ್ಳದ ಅಬ್ದುಲ್ ಸಲಾಂ (27) ಮೃತ ಯುವಕ. ನಾಪತ್ತೆಯಾಗಿದ್ದ ಸಲಾಂಗಾಗಿ ಮನೆಯವರು ಶೋಧ ಆರಂಭಿಸಿದಾಗ ಮನೆ ಸಮೀಪದ ಮರವೊಂದರಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಸಲಾಂ ದೇಹ ಪತ್ತೆಯಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.














