ವಿಶ್ವ ಚಿತ್ರ ರಸಿಕರ ಗಮನ ಸೆಳೆದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ

ಲಾಸ್ ಎಂಜಲೀಸ್: ಎಂ ಎಂ ಕೀರವಾಣಿ ಮತ್ತು ಚಂದ್ರ ಬೋಸ್ ಬರೆದಿರುವ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಗೀತೆಗೆ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ದಿ ಎಲಿಫೆಂಟ್ ವಿಶ್ಪರ್ಸ್ ಉತ್ತಮ ಕಿರು ಸಾಕ್ಷ್ಯ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ. ಇಲ್ಲಿನ ಡಾಲ್ಫಿ ಥೀಯೇಟರ್ ನಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ನಾಟು ನಾಟು ಹಾಡನ್ನು ಪರಿಚಯಿಸಿದರು. ಪ್ರೇಕ್ಷಕರ ಕರತಾಡನ ಮತ್ತು ಶಿಳ್ಳೆಯಿಂದಾಗಿ ಒಂದೆರಡು ಬಾರಿ ದೀಪಿಕಾ ಮಾತು ನಿಲ್ಲಿಸಬೇಕಾದ ಪ್ರಸಂಗವು ನಡೆಯಿತು.

LEAVE A REPLY

Please enter your comment!
Please enter your name here