ಪಂಜಾಬ್ : ಪಂಜಾಬ್ ನ ಭಗವಂತ ಮಾನ್ ನೇತೃತ್ವದ( ಆಮ್ ಅದ್ಮಿ ) ಸರಕಾರವು ಪಂಜಾಬ್ ನಲ್ಲಿ ಬಂದೂಕು ಸಂಸ್ಕೃತಿಯ ವಿರುದ್ಧ ದಿಟ್ಟ ಕ್ರಮ ಕೈಗೊಂಡಿದ್ದು 813ಮಂದಿಯ ಶಸ್ತ್ರಾಸ್ತ್ರ ಪರವಾನಿಗೆಯನ್ನು ರದ್ದುಗೊಳಿಸಿದೆ. ಇದುವರೆಗು 2000ಕ್ಕೂ ಅಧಿಕ ಶಸ್ತ್ರಾಸ್ತ್ರ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ. ಈಗ ಪಂಜಾಬಿನಲ್ಲಿ ಸಾರ್ವಜನಿಕ ಕಾರ್ಯಕ್ರಮ, ಧಾರ್ಮಿಕ ಸ್ಥಳ, ಮದುವೆ ಸಮಾರಂಭ ಅಥವಾ ಇನ್ನೀತರ ಕಾರ್ಯಕ್ರಮಗಳಿಗೆ ಶಸ್ತ್ರಾಸ್ತ್ರ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಬಂದೂಕುಗಳನ್ನು ಇಟ್ಟುಕೊಳ್ಳಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗಿದೆ. ಎಂದು ಪಂಜಾಬ್ ಸರಕಾರ ಹೇಳಿದೆ.