3 ದಿನದಲ್ಲಿ ಇಬ್ಬರು ಬಾಲಕರು ಬೀದಿನಾಯಿಗೆ ಬಲಿ

ಹೊಸದಿಲ್ಲಿ: ಕಳೆದ 3 ದಿನಗಳಲ್ಲಿ ಎಳೆಯ ವಯಸ್ಸಿನ ಇಬ್ಬರು ಸಹೋದರರು ಬೀದಿನಾಯಿಗಳ ದಾಳಿಯಿಂದಾಗಿ ಸಾವನ್ನಪ್ಪಿದ ದಾರುಣ ಘಟನೆ ರಾಷ್ಟ್ರದ ರಾಜಧಾನಿಯ ವಸಂತ್‌ಕುಂಜ್‌ನಲ್ಲಿ ನಡೆದಿದೆ. ಕಳೆದ ಶುಕ್ರವಾರ ವಸಂತ್‌ಕುಂಜ್‌ನ ಸಿಂಧಿ ಕ್ಯಾಂಪ್‌ ಬಳಿ ಬೀದಿನಾಯಿಯೊಂದು 7 ವರ್ಷದ ಆನಂದ್‌ ಎಂಬ ಬಾಲಕನ ಮೇಲೆ ದಾಳಿ ನಡೆಸಿದ್ದು ಗಂಭೀರ ಗಾಯಗಳೊಂದಿಗೆ ಆತ ಸಾವನ್ನಪ್ಪಿದ್ದ. ಇದಾದ 2 ದಿನಗಳ ಬಳಿಕ ಆನಂದ್‌ ಸಹೋದರ ಆದಿತ್ಯ ಕೂಡ ಬೀದಿನಾಯಿಗಳ ದಾಳಿಗೆ ಬಲಿಯಾಗಿದ್ದಾನೆ. ಮೂತ್ರ ವಿಸರ್ಜನೆಗಾಗಿ ತನ್ನ ಮನೆಯಿಂದ ಹೊರ ಬಂದಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದಾಗಿ ಹೇಳಲಾಗಿದೆ. ಸಿಂಧಿ ಕ್ಯಾಂಪ್‌ ಪ್ರದೇಶವು ಕೊಳೆಗೇರಿಗಳನ್ನು ಒಳಗೊಂಡಿದ್ದು ಇಲ್ಲಿ ಹಲವು ಸಮಯದಿಂದ ಬೀದಿನಾಯಿಗಳ ಕಾಟ ವಿಪರೀತವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ ಮತ್ತು ಬೀದಿನಾಯಿಗಳನ್ನು ಸೆರೆ ಹಿಡಿಯುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here