ಬೆಂಗಳೂರು : ರಾಜ್ಯದ ಎಲ್ಲಾ ಉತ್ಪಾದನಾ ಘಟಕಗಳಲ್ಲಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಕರ್ನಾಟಕ ವಿದ್ಯುತ್ ಪ್ರಸರನ ನಿಗಮ ನಿಯಮಿತ ನೌಕರರು ನಿರ್ಧರಿಸಿದ್ದಾರೆ. ಶೆ.40 ವೇತನ ಪರಿಷ್ಕರಣೆ 2022ರ ಎ.1ರಿಂದ ಬಾಕಿ ವೇತನ ಬಿಡುಗಡೆ, ಖಾಲಿ ಹುದ್ದೆಗಳ ನೇಮಕಾತಿ, ವಿದ್ಯುತ್ ಕಂಪೆನಿಗಳ ಖಾಸಗೀಕರಣದ ಪ್ರಾಸ್ತಾವಿಕ ಮಸೂದೆಯನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾ.17ರಂದು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಪವರ್ ಮ್ಯಾನ್ ಗಳಿಂದ ಹಿಡಿದು ಇಂಜಿನಿಯರ್ ಗಳವರೆಗೆ ರಾಜ್ಯದ ಸುಮಾರು 60ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಮುಷ್ಕರ ಕೈಗೊಂಡಲ್ಲಿ ದಿನವೊಂದಕ್ಕೆ 1ಸಾವಿರ ಕೋ.ರೂ ನಷ್ಟ ಸಂಭವಿಸಲಿದೆ.ಒಂದು ದಿನ ವಿದ್ಯುತ್ ಉತ್ಪಾದನೆ ನಿಂತಲ್ಲಿ ಒಂದು ವಾರ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ಮತ್ತೆ 10ರಿಂದ 15 ದಿನಗಳು ಬೇಕಾಗುತ್ತದೆ. ಸರಕಾರದೊಂದಿಗೆ ಮಾತುಕತೆ ನಡೆಸಿ ಸಂಜೆ ವೇಳೆಗೆ ಮುಷ್ಕರ ನಡೆಸುವ ಬಗ್ಗೆ ಯಾ ನಡೆಸದಿರುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ