ಮಂಗಳೂರು: ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ನಂಬಿಸಿ ಕ್ರಿಪ್ಹ್ತೋ ಕರೆನ್ಸಿ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಬಹುದೆಂದು ಅಪರಿಚಿತನೊಬ್ಬ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 1.24 ಕೋ ರೂಪಾಯಿಯ ಪಂಗ ನಾಮ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದ್ದು ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಪ್ಹ್ತೋ ಕರೆನ್ಸಿ ಯಲ್ಲಿ ಆಸಕ್ತಿ ಹೊಂದಿದ್ದ ವ್ಯಕ್ತಿಗೆ ತನ್ನ ಸಹೋದ್ಯೋಗಿ ಮೂಲಕ 2021 ರಲ್ಲಿ ಕೇರಳದ ಪುಟ್ಟಿನವೀಟಿಲ್ ಜಿಜೊ ಜಾನ್ ಪರಿಚಯವಾಗಿದ್ದು, ಜಾನ್ ತಾನು ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ಹೇಳಿದ್ದ. ಕೋವಿಡ್ ಸಮಯವಾದ್ದರಿಂದ ಮುಖತ ಭೇಟಿಯಾಗದೆ ವಾಟ್ಸ್ ಆಪ್ ಮೂಲಕ ಕ್ರಿಪ್ಹ್ತೋ ಬಗ್ಗೆ ಮಾಹಿತಿ ನೀಡಿ ಹೂಡಿಕೆ ಮಾಡುವಂತೆ ತಿಳಿಸಿದ್ದು, ಪ್ರತಿ ತಿಂಗಳು 10% ಹಣ ಲಾಭ ನೀಡುವುದಾಗಿ ಹೇಳಿದ್ದ. ಮೊದಲ ಹಂತದಲ್ಲಿ 2021 ಮಾ 23 ರಿಂದ ಜೂ 1 ರ ವರೆಗೆ 41 ಲಕ್ಷ ಪಾವತಿಸಿದ್ದ ಮಂಗಳೂರಿನ ವ್ಯಕ್ತಿ ವಿವಿಧ ಬ್ಯಾಂಕ್ ಗಳಿಂದ ಸಾಲ ಪಡೆದು 60 ಲಕ್ಷ ಹಣವನ್ನು 2 ನೇ ಹಂತದಲ್ಲಿ ಅ 22 ರಿಂದ 26 ಒಳಗೆ ಪಾವತಿ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೂಡಿಕೆ ಮಾಡಿ ಲಾಭದ ಹಣಕ್ಕಾಗಿ ಕಾದು ಕುಳಿತು, ಕರೆ ಮಾಡಿದರೆ ಕೇರಳದ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದೆ ಹೋದಾಗ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದ್ದು ತಡವಾಗಿ ಸೆನ್ ಠಾಣೆಗೆ ದೂರು ನೀಡಲಾಗಿದೆ.