



ಮಂಗಳೂರು: ಮಾರ್ಚ್ 15 ರಂದು ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾoಗಣದಲ್ಲಿ ತುಳು ನಾಟಕ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ವಿಜಯ ಕುಮಾರ್ ಕೊಡಿಯಾಲಬೈಲ್ ರಚಿಸಿ ನಿರ್ದೇಶಿಸಿದ ಶಿವದೂತೆ ಗುಳಿಗ ನಾಟಕ ಪ್ರದರ್ಶನ ಕಂಡಿದೆ.
ಈ ನಾಟಕದ ಸಂಘಟಕರು ಮೊದಲೇ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದು ತಿಳಿಸಿದ್ದು ಅದರಂತೆ ಜನ ಸೇರಿದ್ದರು. ಇದೇ ದಿನ ಇಲ್ಲಿ ಬಿಜೆಪಿ ಯ ವಿಜಯ ಸಂಕಲ್ಪ ಯಾತ್ರೆ, ಸಮಾವೇಶ ನಡೆದಿದ್ದು ಇದರಲ್ಲಿ ಭಾಗವಹಿಸಿದ ಸಿ ಟಿ ರವಿ ಮತ್ತು ಈಶ್ವರಪ್ಪ ತಮ್ಮ ಎಂದಿನ ಧಾತಿಯಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಮರುದಿನ ಬಿಜೆಪಿ ಯಿಂದ ನಡೆದ ರೈತ ಸಮಾವೇಶದಲ್ಲಿ ಭಾಗವಹಿಸಿದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಸಂಘಟಿಸಿದ ನಾಟಕಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರಿರುವುದು ತಿಳಿಯುತ್ತಲೇ ಸ್ವಲ್ಪ ವಿಚಲಿತರಾಗಿದ್ದಾರೆ.ಮಾತ್ರವಲ್ಲ ಅಸಹನೆಯಿಂದ ಸಭೆಯಲ್ಲಿ ತುಳುನಾಡಿನ ಜನರ ಆರಾಧ್ಯ ದೈವ ಗುಳಿಗನ ಬಗ್ಗೆ ಅಪಹಾಸ್ಯ ಮಾಡಿ ಮಾತನಾಡಿದ್ದು ದೈವಾರಾಧಕರು ಮತ್ತು ನಾಟಕ ಪ್ರಿಯರು ಆಕ್ರೋಶಗೊಳ್ಳುವಂತೆ ಮಾಡಿದೆ. ಯಾವುದೋ ಗುಳಿಗೆ ಕೊಡ್ತಾರಂತೆ, ಜಪಾಲ್ ಗುಳಿಗೆ ಕೊಟ್ರು ಕೊಡಬಹುದು, ಹೊಸ ಹೊಸ ನಾಟಕ ಶುರು ಮಾಡಿದ್ದಾರೆ, ಎಂದು ನಿಂದಿಸಿರುವುದು ತೀರ್ಥಹಳ್ಳಿಯಲ್ಲಿ ನೆಲೆಸಿರುವ ದ ಕ ಮೂಲದ ಜನರನ್ನು ಕೆರಳಿಸಿದೆ. ಗುಳಿಗ ದ ಕ ಜಿಲ್ಲೆಯ ಜನರ ಆರಾಧ್ಯ ದೈವ. ಜನ ಶೃದ್ದಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆ ದೈವದ ಬಗ್ಗೆ ವ್ಯಂಗ್ಯವಾಗಿ, ಅಸಹನೆಯಿಂದ, ಅಪಹಾಸ್ಯ ಮಾಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿರುವುದು ಸರಿಯಲ್ಲ ಎಂಬ ವಿಚಾರ ಈಗ ತೀರ್ಥ ಹಳ್ಳಿಯ ಗಡಿದಾಟಿ ಪ್ರಚಾರ ಪಡೆದುಕೊಳ್ಳುತ್ತಿದ್ದು ಬಿಜೆಪಿಯ ಧರ್ಮ ಪ್ರೇಮದ ಬಣ್ಣ ಕಳಚುತ್ತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.



ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.

















